ದಾವಣಗೆರೆ, ಮಾ. 12- ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಂಗ ಸಂಸ್ಥೆ ದಾವಣಗೆರೆ ಕದಳಿ ಮಹಿಳಾ ವೇದಿಕೆ ತಾಲ್ಲೂಕು ಘಟಕದಿಂದ 122ನೇ ಕದಳಿ ಕಮ್ಮಟವನ್ನು ವಾಟ್ಸಾಪ್ ಮೂಲಕ ನಡೆಸಲಾಯಿತು.
ಲಿಂ. ರಾಜಶೇಖರಯ್ಯ ಮತ್ತು ಲಿಂ. ಆರ್. ದಯಾನಂದ್ ಹಾಗೂ ಲಿಂ. ಸಿದ್ದಮ್ಮ ಮತ್ತು ಲಿಂ. ಚನ್ನಬಸಮ್ಮ ಅವರ ದತ್ತಿ ಉಪನ್ಯಾಸ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವೇದಿಕೆಯ ಸದಸ್ಯರಿಗಾಗಿ ನಮ್ಮ ಮಹಿಳಾ ಸಾಧಕಿಯರ ಬಗ್ಗೆ ನಾವೆಷ್ಟು ಬಲ್ಲೆವು ಶೀರ್ಷಿಕೆಯಡಿ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಅಧ್ಯಕ್ಷತೆಯನ್ನು ತಾಲ್ಲೂಕು ಘಟಕದ ಅಧ್ಯಕ್ಷರಾದ ಕುಸುಮಾ ಲೋಕೇಶ್ ವಹಿಸಿದ್ದರು.
ದತ್ತಿ ಉಪನ್ಯಾಸಕರಾಗಿ ಶಿಕ್ಷಣಾಧಿಕಾರಿ ಪುಷ್ಪಲತಾ ಅವರು ಒತ್ತಡ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ವಿಷಯ ಕುರಿತು ಮಾತನಾಡಿದರು. ಲಿಖಿತ ರಸಪ್ರಶ್ನೆ ವಿಭಾಗದಲ್ಲಿ ಮಮತ ರಾಧಾಕೃಷ್ಣ ಪ್ರಥಮ, ಇಂದಿರಾ ರಂಗನಾಥರೆಡ್ಡಿ ದ್ವಿತೀಯ, ಪೂರ್ಣಿಮಾ ಪಾಟೀಲ್ ತೃತೀಯ ಹಾಗೂ ಹೇಮ ಜಿ. ಶೇಠ್ ಸಮಾಧಾನಕರ ಹಾಗೂ ಸಮಿತಿ ಸದಸ್ಯರ ವಿಭಾಗದಲ್ಲಿ ವಿಜಯ ಚಂದ್ರಶೇಖರ್ ಬಹುಮಾನ ಪಡೆದರು.
ಕದಳಿ ವೇದಿಕೆಯ ಗೌರವಾಧ್ಯಕ್ಷರಾದ ಶಂಶಾದ್ ಬೇಗಂ ಹಾಗೂ ದತ್ತಿ ಪಂಕಜಾ ದಯಾನಂದ್ ಉಪಸ್ಥಿತರಿದ್ದರು.
ಚಂದ್ರಿಕಾ ಮಂಜುನಾಥ್ ನಿರೂಪಿಸಿದರು. ಮುಕ್ತಾಯಕ್ಕ ತಂಡದವರು ಪ್ರಾರ್ಥಿಸಿದರು. ವಿಜಯಲಕ್ಷ್ಮಿ ಸ್ವಾಗತಿಸಿದರು. ವಾಣಿರಾಜ್ ದತ್ತಿ ಹಾಗೂ ದತ್ತಿ ದಾನಿಗಳನ್ನು ಪರಿಚಯಿಸಿದರು. ನಿರ್ಮಲ ಶಿವಕುಮಾರ್ ವಂದಿಸಿದರು.