ಹರಪನಹಳ್ಳಿ, ಮಾ.12- ತಾಯಿ,ತಂಗಿ,ಅಕ್ಕ,ಮಡದಿ,ಗೆಳತಿ,ಅಜ್ಜಿ,ಚಿಕ್ಕಮ್ಮ ಹೀಗೆ ನಾನಾ ವೇಷಗಳಲ್ಲಿ ಸಂಬಂಧಗಳ ಸರಮಾಲೆಯನ್ನು ತೊಟ್ಟು ನಿಂತ ಮಹಿಳೆಯರು ಇಂದು ಎಲ್ಲಾ ರಂಗಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಎಂದು ನೀಲಗುಂದ ಗುಡ್ಡದ ವಿರಕ್ತ ಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕೆ. ಕಲ್ಲಹಳ್ಳಿ ಗ್ರಾಮದಲ್ಲಿ ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹಿಳೆಯರಿಗೆ ಸನ್ಮಾನ, ಕೋಲಾಟ, ರಸಪ್ರಶ್ನೆ ಮತ್ತು ಭಜನಾ ಸ್ಪರ್ಧೆ ಕಾರ್ಯ ಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್ ಮಾತನಾಡಿದರು.
ಕೆಪಿಸಿಸಿ ವೈದ್ಯಕೀಯ ಘಟಕದ ಉಪಾಧ್ಯಕ್ಷ ಡಾ. ಮಹಂತೇಶ ಚರಂತಿಮಠ್, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತ ರಂಗ ಕಲಾವಿದೆ ಮರಿಯಮ್ಮನಹಳ್ಳಿ ನಾಗರತ್ನಮ್ಮ, ಧಾರಾವಾಹಿ ನಟಿ ಮಾನಸ, ಸಖಿ ಟ್ರಸ್ಟ್ನ ಭಾಗ್ಯಮ್ಮ, ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ವಾಗೀಶ್, ಶಿಕ್ಷಕಿ ಸುಭದ್ರಮ್ಮ, ಕವಿತ ಶಿವಮೊಗ್ಗ, ಮಮ್ತಾಜ್, ಟುವ್ವಿ ಟುವ್ವಿ ಪುಷ್ಪ, ಕಾಳಮ್ಮ, ಚಿಗಟೇರಿ ಯುವ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್, ದಾದಾಪೀರ್. ಮನೋಜ್ ಇನ್ನಿತರರಿದ್ದರು.