ದಾವಣಗೆರೆ, ಮೇ 18- ಕೊರೊನಾ ಸಂಕಷ್ಟದ ಸ್ಥಿತಿಯಲ್ಲಿ ದಿನಗೂಲಿಕಾರರು ಮತ್ತು ಅಲೆಮಾರಿ ಜನರು ಅನುಭವಿಸುತ್ತಿರುವ ಕಷ್ಟಕ್ಕೆ ದೇವನಗರಿ ಫೌಂಡೇಶನ್ ಹೆಗಲಾಗಿ ಸೇವೆ ಮಾಡುತ್ತಿದೆ.
ಇಂಜಿನಿಯರಿಂಗ್ ಓದಿರುವ ಅನುಭವ ಮಂಟಪದ ಹಳೆಯ ವಿದ್ಯಾರ್ಥಿಗಳಾದ ಶಿವಾಸ್, ತೇಜಸ್ ಚನ್ನಪ್ಳ, ಋತ್ವಿಕ್ರೆಡ್ಡಿ, ತೇಜಸ್ ಶೆಟ್ಟಿ, (ಆಕರ್ಷ್ ಟಿ.ವಿ, ಮೊಬೈಲ್ ಮಾಲೀಕರು) ನೊಂದವರ ನೋವಿಗೆ ನೆರವಾಗಿ ಒಂದು ವಾರದಿಂದ ಸುಮಾರು 80 ಬಡ ಕುಟುಂಬಗಳಿಗೆ ತಾವೂ ಮತ್ತು ದಾನಿಗಳ ನೆರವಿನಿಂದ ಅಕ್ಕಿ, ಬೇಳೆ, ರವೆ, ಎಣ್ಣೆ, ಖಾರದಪುಡಿ ಮತ್ತಿತರೆ ಅಗತ್ಯ ವಸ್ತುಗಳ ಕಿಟ್ಟನ್ನು ಕಷ್ಟದಲ್ಲಿರುವ ಬಡವರಿಗೆ ಹಂಚುತ್ತಿದ್ದಾರೆ. ದಾನಿಗಳು ಮೊಬೈಲ್ 87470 99680, 97386 18686 ಕ್ಕೆ ಸಂಪರ್ಕಿಸುವುದು.