ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡುಗೆ

ರಾಣೇಬೆನ್ನೂರು, ಮೇ 18-  ಕೊರೊನಾಗೆ ಸಂಬಂಧಿಸಿದ ಸರ್ಕಾರದ ಕಾರ್ಯಕ್ರಮಗಳ ಜೊತೆ ಕೈಜೋಡಿಸಿ ಜನರ ರಕ್ಷಣೆಗೆ ಸಹಕಾರ ನೀಡುತ್ತಿರುವ ದೇವರಗುಡ್ಡ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಅವರ ಕಾರ್ಯ ಶ್ಲಾಘನೀಯವಾದುದು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ಕಳೆದ ಲಾಕ್‌ಡೌನ್‌ ಸಂದರ್ಭದಲ್ಲಿ ಬಡವರಿಗೆ ದಿನಸಿ ಕಿಟ್‌ಗಳನ್ನು  ನೀಡಿದ್ದರು. ನಂತರ ಗ್ರಾಮೀಣ ಜನರ ಸಂಕಷ್ಟಕ್ಕೆ ಸ್ಪಂದಿಸಲು ಒಂದು ಆಂಬ್ಯುಲೆನ್ಸ್ ತಂದಿದ್ದರು. ಅದನ್ನು ನಗರದ  ಆರೋಗ್ಯ ಇಲಾಖೆಯ ಸುಪರ್ದಿಗೆ ಕೊಡಲಾಗಿದೆ. ಇಂದು ಆಕ್ಸಿಜನ್ ಕಾನ್ಸಂಟ್ರೇಟರ್‌ ಕೊಟ್ಟಿದ್ದಾರೆ ಎಂದು ಶಾಸಕರು ಹೇಳಿದರು.

ಗ್ರಾಮದ ಆರೋಗ್ಯ ಕೇಂದ್ರಕ್ಕೆ 10 ಲೀಟರ್ ನ ಎರಡು  ಆಕ್ಸಿಜನ್  ಕಾನ್ಸಂಟ್ರೇಟರ್ ನೀಡಿ ಅವರು ಮಾತನಾಡಿದರು. 

ಗ್ರಾ.ಪಂ. ಅಧ್ಯಕ್ಷ ಮಾಲತೇಶ ನಾಯರ್, ಡಾ. ದಾದಾಪೀರ್, ಪಿಡಿಒ ಬಸವರಾಜ್, ಪವನ ದೇಸಾಯಿ, ಪವನ ಮಲ್ಲಾಡದ, ಚಿಕ್ಕಪ್ಪ ಐಗಳ, ಉದಯ, ದೇವೇಂದ್ರಪ್ಪ ಮತ್ತಿತರರಿದ್ದರು.

ಸಚಿವರಿಂದ ಆಹಾರ ಕಿಟ್ ಕೋವಿಡ್‌ ತಡೆಗಟ್ಟಲು ಸರ್ಕಾರ ಮಾಡಿರುವ ಲಾಕ್‌ಡೌನ್‌ನಿಂದಾಗಿ ಕಷ್ಟ ಪಡುತ್ತಿರುವ ತಾಲ್ಲೂಕಿನ ಕಡು ಬಡವರಿಗೆ   ರೇಷ್ಮೆ ಖಾತೆ ಸಚಿವ ಆರ್. ಶಂಕರ್   5 ಕೆ.ಜಿ. ಅಕ್ಕಿ, 1 ಕೆ.ಜಿ. ಸಕ್ಕರೆ ಹಾಗೂ ನೂರು ಗ್ರಾಂ ಚಹಾಪುಡಿ ತುಂಬಿದ ಕಿಟ್‌ಗಳನ್ನು ಇಂದು ವಿತರಿಸಿದರು.

ಶಾಸಕರಿಂದ ಹೋಳಿಗೆ ಊಟ ಬಸವ ಜಯಂತಿ ಪ್ರಯುಕ್ತ ನಗರದ ಆರಕ್ಷಕರಿಗೆ, ಪೌರಕಾರ್ಮಿಕರಿಗೆ  ಇಲ್ಲಿನ ನಗರಸಭೆ  ಗುಡ್ಡದ ಬಸಪ್ಪ ಸ್ಮಾರಕ ಟೌನ್‌ಹಾಲ್‌ನಲ್ಲಿ  ಶಾಸಕ ಅರುಣ್ ಕುಮಾರ್ ಪೂಜಾರ್ ಹೋಳಿಗೆ ಊಟ ಏರ್ಪಡಿಸಿದ್ದರು. ನಗರಸಭೆಯ ಹಲವು ಸದಸ್ಯರು, ಬಿಜೆಪಿ ನಾಯಕರು,  ಪತ್ರಕರ್ತರು ಭಾಗವಹಿಸಿದ್ದರು.

error: Content is protected !!