ಕದಳಿ ವೇದಿಕೆಯಿಂದ 125ನೇ ಕಮ್ಮಟ

ದಾವಣಗೆರೆ, ಮೇ 18- ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಂಗ ಸಂಸ್ಥೆಯಾದ ಕದಳಿ ಮಹಿಳಾ ವೇದಿಕೆ, ತಾಲ್ಲೂಕು ಘಟಕದ ವತಿಯಿಂದ  ವಾಟ್ಸಾಪ್‌ ಮೂಲಕ ಬಸವ ಜಯಂತಿ ಹಾಗೂ ವಿಶ್ವ ತಾಯಂದಿರ ದಿನಾಚರಣೆ ಆಚರಿಸಲಾಯಿತು.

ಅಧ್ಯಕ್ಷತೆಯನ್ನು ಕದಳಿ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷರಾದ ಕುಸುಮ ಲೋಕೇಶ್‌ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಂಬುಜ ಕೆ ಆಗಮಿಸಿ `ವರ್ತಮಾನ ತಲ್ಲಣಗಳಲ್ಲಿ ತಾಯಂದಿರ ಪಾತ್ರ, ಬಸವ ವಚನಾಮೃತ’ ವಿಷಯ ಕುರಿತು ಉಪನ್ಯಾಸ ನೀಡಿದರು. ಗೌರವಾಧ್ಯಕ್ಷರಾದ ಶಂಶಾದ್‌ ಬೇಗಮ್‌ರವರು  ಉಪಸ್ಥಿತರಿದ್ದು, ವಚನ ಗಾಯನ ಪ್ರಸ್ತುತ ಪಡಿಸಿದರು.

ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ಶರಣರ ವೇಷಭೂಷಣ ಹಾಗೂ ವಚನ ವಾಚನ ಮತ್ತು ವಿಶ್ಲೇಷಣೆ ಸ್ಪರ್ಧೆಯನ್ನು ಏರ್ಪಡಿಸ ಲಾಗಿತ್ತು. ವಿಜೇತರಾಗಿ ಗೀತ ಬಿ.ಜಿ. (ಪ್ರಥಮ), ಶೈಲಜ ಪಾಲಾಕ್ಷ (ದ್ವಿತೀಯ), ಚೆನ್ನಮಲ್ಲಿಕಾರ್ಜುನ (ತೃತೀಯ) ಬಹುಮಾನ ಪಡೆದರು. ವೀಣಾ ಜೆ ಮತ್ತು ಸುಶೀಲ ಬಸವರಾಜ್‌ ಸಮಾಧಾನಕರ ಬಹುಮಾನ ಹಾಗೂ ಗಿರಿಜಾ ಬಿಲ್ಲಳ್ಳಿ, ರೇಖಾ ಪ್ರಭು ಪ್ರೋತ್ಸಾಹದಾಯಕ ಬಹುಮಾನ ಪಡೆದರು.

ಕಾರ್ಯಕ್ರಮವನ್ನು ನಿರ್ಮಲ ಶಿವಕುಮಾರ್‌ ನಿರೂಪಿಸಿದರು. ಸದಸ್ಯೆ ಚಿನ್ನ ಮಲ್ಲಿಕಾರ್ಜುನ್‌ ಹಾಗೂ ಕು. ಭಾನು ಪ್ರಾರ್ಥಿಸಿದರು. ಚಂದ್ರಿಕ ಮಂಜುನಾಥ್‌ ಸ್ವಾಗತಿಸಿದರು, ವಿಜಯಲಕ್ಷ್ಮಿ ಬಸವರಾಜ್‌ ಅತಿಥಿಗಳನ್ನು ಪರಿಚಯಿಸಿದರು. ವಾಣಿ ರಾಜ್‌ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದರು.

error: Content is protected !!