ಶಿವರಾತ್ರಿ ನಿಮಿತ್ತ ಗಂಗಾಜಲ ವಿತರಣೆ

ಹರಪನಹಳ್ಳಿ ಪಟ್ಟಣದ ಶಿವಾಲಯಗಳಲ್ಲಿ ಸಂಭ್ರಮದ ಶಿವರಾತ್ರಿ 

ಹರಪನಹಳ್ಳಿ, ಮಾ.11- ಮಹಾಶಿವರಾತ್ರಿ ಅಂಗವಾಗಿ ಮಾಜಿ ಸಚಿವ ಮಾಲೂರು ಕೃಷ್ಣಯ್ಯಶೆಟ್ಟಿ ಕಳಿಸಿಕೊಟ್ಟಿದ್ದ   ಪವಿತ್ರ ಗಂಗಾ ಜಲವನ್ನು ತಾಲ್ಲೂಕಿನ ಎಲ್ಲಾ ಶಿವ ದೇವಾಲಯಗಳಿಗೂ ಹಾಗೂ  ಮುಜರಾಯಿ ಇಲಾಖೆಯ ದೇವಾಲಯಗಳಿಗೆ ಶಿವರಾತ್ರಿ ಹಿಂದಿನ ದಿನ ತಹಶೀಲ್ದಾರ್  ಎಲ್.ಎಂ. ನಂದೀಶ್ ವಿತರಿಸಿದರು.

10 ಲೀಟರ್‌ನ  ಮೂರು ಕ್ಯಾನುಗಳಲ್ಲಿ ಗಂಗಾಜಲ ವನ್ನು ಕಳುಹಿಸಲಾಗಿದ್ದು, ನಾಲ್ಕು ಹೋಬಳಿಗೂ ಗಂಗಾ ಜಲವನ್ನು ವಿತರಿಸಲಾಯಿತು. ಧಾರ್ಮಿಕ ದತ್ತಿ ಇಲಾಖೆಯ ಉಚ್ಚಂಗಿದುರ್ಗದ ರಮೇಶ್ ಇದ್ದರು. ದೇವಸ್ಥಾನಗಳ ಅರ್ಚಕರು  ಭಕ್ತರಿಗೆ ತೀರ್ಥ ರೂಪದಲ್ಲಿ ವಿತರಿಸಿದರು.

ತಾಲ್ಲೂಕಿನಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಹಾ ಶಿವರಾತ್ರಿಯನ್ನು ಜನರು ಆಚರಿಸಿದ್ದು, ಪಟ್ಟಣದ ಗೋಕರ್ಣೇಶ್ವರ ದೇವಾಲಯ,  ವಾಲ್ಮೀಕಿ ನಗರದ ಗೋಣಿ ಬಸವೇಶ್ವರ ದೇವಾಲಯ,  ನಗರೇ ಶ್ವರ, ಎಸ್‌ಬಿಎಂ ಬಳಿ  ಇರುವ, ಗಣೇಶ ದೇವಸ್ಥಾನದ ಶಿವ ದೇವಾ ಲಯ,  ಬೆಸ್ಕಾಂ ಕಛೇರಿ ಬಳಿ ಹೀಗೆ ವಿವಿಧೆಡೆ ಶಿವ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಅನೇಕರು ಉಪವಾಸವಿದ್ದು, ಶಿವನಿಗೆ ಭಕ್ತಿ ಸಮರ್ಪಿಸಿದರು. ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಬಾಗಳಿಯ ಐತಿಹಾಸಿಕ ಕಲ್ಲೇಶ್ವರ ದೇವಾಲಯದಲ್ಲಿ ಬೇರೆ ಬೇರೆ ಗ್ರಾಮಗಳ ಭಕ್ತರು ಆಗಮಿಸಿ, ಅಭಿಷೇಕ ಮಾಡಿಸಿ, ವಿಶೇಷ ಪೂಜೆ ಸಲ್ಲಿಸಿದರು.

 ಕೂಲಹಳ್ಳಿಯ ಗೋಣಿಬಸವೇಶ್ವರ, ನೀಲಗುಂದ ಭೀಮೇಶ್ವರ  ದೇವಸ್ಥಾನಗಳಲ್ಲಿ  ವಿಶೇಷ ಪೂಜೆ ನೆರವೇರಿತು. ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣು ಸೇರಿದಂತೆ ವಿವಿಧ ಬಗೆಯ ಹಣ್ಣುಗಳಿಗೆ ಭಾರೀ ಬೇಡಿಕೆ ಉಂಟಾಗಿತ್ತು. ಹೂವು, ಕಾಯಿ ವ್ಯಾಪಾರ ಜೋರಾಗಿತ್ತು.

error: Content is protected !!