ದಾವಣಗೆರೆ, ಮೇ 17- ಎಸ್.ಎಸ್. ಮಲ್ಲಿಕಾರ್ಜುನ್ ಯುವಶಕ್ತಿ ಬಳಗ ಮತ್ತು ಹೇಮಾವತಿ ಆಟೋ ಚಾಲಕರ ಸಂಘದ ಸಂಯುಕ್ತಾಶ್ರಯದಲ್ಲಿ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾದವರಿಗೆ ನಗರಸಭೆ ಮಾಜಿ ಸದಸ್ಯ ಶಾಮನೂರು ಎಸ್. ಬಸವರಾಜ್ ನೇತೃತ್ವದಲ್ಲಿ ಜಿಲ್ಲಾ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ, ಕೊರೊನಾ ವಾರಿಯರ್ಸ್ ಗೆ ಉಪಹಾರ, ನೀರಿನ ಬಾಟಲಿ ಮತ್ತು ಮಾಸ್ಕ್ ಗಳನ್ನು ವಿತರಿಸಲಾಯಿತು.
ಎಸ್.ಎಸ್. ಮಲ್ಲಿಕಾರ್ಜುನ್ ಯುವಶಕ್ತಿ ಬಳಗದ ಸಂಸ್ಥಾಪಕರೂ ಆದ ಕರ್ನಾಟಕ ದಲಿತ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಮನೂರಿನ ಕಣ್ಣಾಳ ಅಂಜಿನಪ್ಪ, ಹೇಮಾವತಿ ಆಟೋ ಚಾಲಕರ ಸಂಘದ ಅಧ್ಯಕ್ಷ ಸುಧಾಕರ್, ಯುವ ಮುಖಂಡ ಶಾಮನೂರು ನಾಗರಾಜ್, ಆಪೆ ಗಾಡಿ ಮಂಜುನಾಥ್, ಸುರೇಶ್, ಈಶ್ವರ ಕಾಡಜ್ಜಿ, ಸೀನು ಕಾಡಜ್ಜಿ, ಮಧು, ಜೆರಾಕ್ಸ್, ಸತೀಶ್ ನಾಯ್ಕ್, ಪ್ರವೀಣ್, ನಂದೀಶ್ ಮತ್ತಿತರರು ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.