ಹರಿಹರ, ಮೇ 17- ಗುತ್ತೂ ರಿನ ಲ್ಲಿರುವ ಕೋವಿಡ್ ಕೇರ್ ಸೆಂಟರ್‌ಗೆ ಸೋಮವಾರ ಶಾಸಕ ಎಸ್.ರಾಮಪ್ಪ ಅವರು ಭೇಟಿ ನೀಡಿ, ವ್ಯವಸ್ಥೆಗಳನ್ನು ಪರಿಶೀಲಿಸಿದರು. ನಂತರ ಶಾಸಕರು ಹರ್ಲಾಪುರದಲ್ಲಿರುವ ಆರೋಗ್ಯ ಕೇಂದ್ರಕ್ಕೂ ತೆರಳಿ, ಕೋವಿಡ್ ಲಸಿಕೆ ಹಾಕುವುದನ್ನು ಪರಿಶೀಲಿಸಿದರು. ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ಟಿಹೆಚ್ಒ ಡಾ. ಚಂದ್ರಮೋಹನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬೀದ್ ಅಲಿ ಈ ವೇಳೆ ಹಾಜರಿದ್ದರು.
ಆಂಬ್ಯುಲೆನ್ಸ್ ಸೇವೆ : ಶಾಸಕ ಎಸ್.ರಾಮಪ್ಪ ಅವರು, ಹರಿಹರ ತಾಲ್ಲೂಕಿನ ಜನರಿಗಾಗಿ 2 ಆಕ್ಸಿಜನ್ ಸಿಲಿಂಡರ್ ಹೊಂದಿರುವ 2 ಆಂಬ್ಯುಲೆನ್ಸ್ ವಾಹನಗಳನ್ನು ಮಂಗಳವಾರ ಬೆಳಿಗ್ಗೆ 10.30ಕ್ಕೆ ಹರಿಹರದಲ್ಲಿ ಮತ್ತು 11.30ಕ್ಕೆ ಮಲೇಬೆನ್ನೂರಿನಲ್ಲಿ ಸಮರ್ಪಣೆ ಮಾಡಲಿದ್ದಾರೆ ಎಂದು ಎಂ.ಬಿ.ಅಬೀದ್ ಅಲಿ ತಿಳಿಸಿದರು.