ಮಹಿಳೆಯರಿಗೆ ಶಾಂತಿ, ಧೈರ್ಯ, ಛಲ ಪ್ರಕೃತಿಯ ಕೊಡುಗೆ

ಹರಪನಹಳ್ಳಿಯಲ್ಲಿ ನ್ಯಾ. ಉಂಡಿ ಮಂಜುಳಾ ಶಿವಪ್ಪ

ಹರಪನಹಳ್ಳಿ, ಮಾ.11- ಶಾಂತಿ, ಧೈರ್ಯ, ಛಲ ಇವುಗಳು ಮಹಿಳೆಯರಿಗೆ ಪ್ರಕೃತಿಯ ಕೊಡುಗೆಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಉಂಡಿ ಮಂಜುಳಾ ಶಿವಪ್ಪ   ಹೇಳಿದರು.

ತಾಲ್ಲೂಕಿನ ನೀಲಗುಂದ ಗ್ರಾಮದ ಶ್ರೀಮಠದ ಶ್ರೀ ಚನ್ನಬಸವ ಶಿಕ್ಷಣ ಸಂಸ್ಥೆ, ಬಸ ವಾದಿ ಶರಣರ ಸ್ಮಾರಕ, ಶಾಲಾ-ಕಾಲೇಜುಗಳ ವಾರ್ಷಿಕೋತ್ಸವ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶತಮಾನಗಳಿಂದಲೂ ದೌರ್ಜನ್ಯ, ದಬ್ಬಾಳಿಕೆಗೆ ಒಳಗಾಗಿ ಮೌನದಿಂದಲೇ ತಮ್ಮ ಮೇಲೆ ನಡೆಯುತ್ತಿರುವ ಅನ್ಯಾಯಗಳಿಗೆ ಗೆಲು ವನ್ನು ಮರೆಯಲ್ಲೇ ಸಾಧಿಸುತ್ತಾ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತಮ್ಮ ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ವರದಕ್ಷಿಣೆ ವಿಚಾರವಾಗಿ ಕಾನೂನನ್ನು ದುರ್ಬಳಕೆ ಮಾಡಿ ಕೊಳ್ಳುತ್ತಿರುವುದು ಕೇಳಿ ಬರುತ್ತಿದ್ದು, ಮಹಿ ಳೆಯ ಯಾವುದೇ ವಿಚಾರದಲ್ಲೂ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದರು.

ನೀಲಗುಂದ ಗುಡ್ಡದ ವಿರಕ್ತ ಮಠದ ಪೀಠಾಧಿಪತಿ ಶ್ರೀ ಚನ್ನಬಸವ ಶಿವಯೋಗಿ  ಸ್ವಾಮೀಜಿ ಮಾತನಾಡಿ ಹೆಣ್ಣು ಸಂಸಾರದ ಕಣ್ಣು ಎನ್ನುವುದಕ್ಕಿಂತ  ಹೆಣ್ಣು ಜಗದ ಕಣ್ಣು. ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತು ಹೋಗ ಬೇಕು. ಭ್ರಷ್ಟಾಚಾರ  ನಿರ್ಮೂಲನೆ ಹೆಣ್ಣು ಮಕ್ಕಳಿಂದಲೇ ಸಾಧ್ಯ ಎಂದು ಹೇಳಿದರು.

ಅಪರ ಸರ್ಕಾರಿ ವಕೀಲ ಕಣಿವಿಹಳ್ಳಿ ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಕೀಲರುಗಳಾದ ವಿ.ಜಿ. ಪ್ರಕಾಶ್ ಗೌಡ, ಎಂ. ಮೃತ್ಯುಂಜಯ, ಬೇಲೂರು ಸಿದ್ದೇಶ್, ವಾಗೇಶ್,  ಹೊಸಮನಿ ಮಂಜು ನಾಥ್, ಗುಡದಯ್ಯ, ಬೇಲೂರು ಸಿದ್ದೇಶ್ ಮುಖಂಡರಾದ ಗುಂಡಗತ್ತಿ ಕೊಟ್ರಪ್ಪ, ಮೈಲಪ್ಪ, ಜಿ. ರೇಣುಕ, ಬಸವರಾಜ್, ಕೊಟ್ರೇಶ್ ಹಾಗೂ  ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

error: Content is protected !!