ಲಸಿಕೆ ಬಗ್ಗೆ ಆತಂಕವೇ ಬೇಡ

ಹರಪನಹಳ್ಳಿ, ಮೇ 17- ಕೋವಿಡ್ ಲಸಿಕೆ ಬಗ್ಗೆ ಆತಂಕ ಬೇಡ. ಸೋಂಕಿನ ಲಕ್ಷಣ ಗಳುಳ್ಳ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ ಎಂದು ಪುರಸಭೆ ಸದಸ್ಯ ಜಾಕೀರ್ ಹುಸೇನ್ ಹೇಳಿದರು. ಪಟ್ಟಣದ 11ನೇ ವಾರ್ಡ್‌ನಲ್ಲಿ ಪುರಸಭೆಯ ವತಿಯಿಂದ ಕೋವಿಡ್-19 ಸಾಂಕ್ರಾಮಿಕ ರೋಗದ ಲಕ್ಷಣಗಳುಳ್ಳ ವ್ಯಕ್ತಿಗಳ ಸಮೀಕ್ಷೆ ನಡೆಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ  ಔಷಧಿ ಕಿಟ್‌ ವಿತರಿಸಿ ಮಾತನಾಡಿದರು.

ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಪಿ. ಮಂಜುನಾಥ ಮಾತನಾಡಿ,  ಯಾವುದೇ ಮುಜುಗರಕ್ಕೆ ಒಳಗಾಗದೆ ಔಷಧಿಯನ್ನು ತೆಗೆದುಕೊಂಡು ಕೊರೊನಾ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಸಹಕರಿಸಿ ಎಂದರು. 

error: Content is protected !!