ಮಲೇಬೆನ್ನೂರು, ಜು.28- ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಮಲೇಬೆನ್ನೂರಿನಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಂಭ್ರಮಿಸಿದರು. ಪಟ್ಟಣದ ಮುಖ್ಯ ವೃತ್ತ ಮತ್ತು ಎಸ್ಬಿಐ ಶಾಖೆ ಎದುರು ನಡೆದ ವಿಜಯೋತ್ಸವದ ನೇತೃತ್ವ ವಹಿಸಿದ್ದ ಜಿ.ಪಂ. ಮಾಜಿ ಸದಸ್ಯ ಬಿ.ಎಂ. ವಾಗೀಶ್ ಸ್ವಾಮಿ ಮಾತನಾಡಿ, ಬೊಮ್ಮಾಯಿ ಆಯ್ಕೆ ಸುಸೂತ್ರವಾಗಿ ನಡೆದಿರುವುದು ಬಿಜೆಪಿಯ ಸಂಘಟನೆ ಹಾಗೂ ಒಗ್ಗಟ್ಟಿಗೆ ಸಾಕ್ಷಿಯಾಗಿದೆ ಎಂದರು.
ಹರಿಹರ ತಾಲ್ಲೂಕು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ಪ್ರಧಾನ ಕಾರ್ಯದರ್ಶಿ ಆದಾಪುರ ವೀರೇಶ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬೇವಿನಹಳ್ಳಿ ಮಹೇಶ್ವರಗೌಡ, ದಿಶಾ ಸಮಿತಿ ಸದಸ್ಯ ಐರಣಿ ಅಣ್ಣಪ್ಪ, ಪುರಸಭೆಯ ಮಾಜಿ ಸದಸ್ಯರಾದ ಮಹಾಂತೇಶ್ ಸ್ವಾಮಿ, ಗೌಡ್ರ ಮಂಜಣ್ಣ, ಪಿ.ಆರ್. ರಾಜು, ಎ.ಕೆ. ಲೋಕೇಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಪಾನಿಪೂರಿ ರಂಗನಾಥ್, ಬಿ. ಮಂಜುನಾಥ್, ಮುಖಂಡರಾದ ಹುಳ್ಳಳ್ಳಿ ಸಿದ್ದೇಶ್, ಬೆಣ್ಣೆಹಳ್ಳಿ ಸಿದ್ದೇಶ್, ಕೂಲಂಬಿ ಸಿದ್ದೇಶ್, ಬುಕ್ಸ್ಟಾಲ್ ಮಂಜು, ಬೆಣ್ಣೆಹಳ್ಳಿ ಬಸವರಾಜ್, ಉಡೇದರ ಸಿದ್ದೇಶ್, ಕೆ.ಬಿ. ರಾಜು, ಕೊಮಾರನಹಳ್ಳಿಯ ಸುನೀಲ್, ಜಿಗಳಿ ಹನುಮಗೌಡ ಹಾಗು ಇನ್ನಿತರರಿದ್ದರು.