ಹರಿಹರ, ಮೇ 16- ಕೊರೊನಾ ಸಮಯದಲ್ಲಿ ನಗರಸಭೆ ಪೌರ ಕಾರ್ಮಿಕರು, ಪೊಲೀಸ್ ಸಿಬ್ಬಂದಿಗಳು ಮತ್ತು ಇತರೆ ಇಲಾಖೆ ಅಡಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುವವರಿಗೆ ಎನ್.ಹೆಚ್.ಶ್ರೀನಿವಾಸ್ ಸ್ನೇಹ ಬಳಗದ ವತಿಯಿಂದ ಸುಮಾರು 2000 ಹಬೆ ಯಂತ್ರ, ಫೇಸ್ ಶೀಲ್ಡ್ ವಿತರಣೆ ಮಾಡಲಾಗುತ್ತದೆ. ಅದರ ಜೊತೆಗೆ ರಾಜನಹಳ್ಳಿ ಸೇರಿದಂತೆ ಇತರೆ ಗ್ರಾಮಗಳ ಆಟೋ ಚಾಲಕರಿಗೆ ಆಹಾರದ ಕಿಟ್ ವಿತರಣೆ ಮಾಡಲಾಯಿತು ಎಂದು ಉದ್ಯಮಿ ಎನ್.ಹೆಚ್.ಶ್ರೀನಿವಾಸ್ ತಿಳಿಸಿದ್ದಾರೆ.
ನಗರಸಭೆ ಆವರಣದಲ್ಲಿ ಪೌರ ಕಾರ್ಮಿಕರಿಗೆ ಹವೆ ಯಂತ್ರ, ಫೇಸ್ ಶೀಲ್ಡ್ ವಿತರಣೆ ಮಾಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಎಂ.ಎಸ್.ಬಾಬುಲಾಲ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಸದಾಶಿವ, ನಗರಸಭೆ ಸಿಬ್ಬಂದಿಗಳಾದ ಕುಮಾರ್, ಸಂತೋಷ್, ಬಸವರಾಜ್, ಮರಿದೇವಪ್ಪ, ತಿಪ್ಪೇಸ್ವಾಮಿ, ಶ್ರೀನಿವಾಸ್ ಸ್ನೇಹ ಬಳಗದ ಸುಚೇತ್ ಹಾಗೂ ಇತರರು ಹಾಜರಿದ್ದರು.