ಎಂ.ಪಿ.ಲತಾ ಮಲ್ಲಿಕಾರ್ಜುನ್
ಹರಪನಹಳ್ಳಿ, ಮಾ.10- ಬಸವಾದಿ ಶರಣರು ಅನುಭವ ಮಂಟಪದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳೆಯರಿಗೆ ಪ್ರಾತಿನಿಧ್ಯವನ್ನು ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದರು ಎಂದು ಕೆಪಿಸಿಸಿ ಮಹಿಳಾ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹೇಳಿದರು.
ತಾಲ್ಲೂಕಿನ ನೀಲಗುಂದ ಗ್ರಾಮದ ಗುಡ್ದದ ವಿರಕ್ತಮಠದ ಆವರಣದಲ್ಲಿ ಎಂ.ಪಿ. ರವೀಂದ್ರ ಪ್ರತಿಷ್ಠಾನ ಮತ್ತು ನೀಲಗುಂದ ಜಂಗಮ ಪೀಠ ಗುಡ್ಡದ ವಿರಕ್ತ ಮಠ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ದಿನಾಚರಣೆ ಅಂಗವಾಗಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರು ಮಹಿಳೆಯರಿಗೆ ಸೀರೆ ಮತ್ತು ಕುಪ್ಪಸ ಕೊಟ್ಟು ಉಡಿ ತುಂಬಿ ಗೌರವಿಸಿದರು. ಗುಡ್ಡದ ವಿರಕ್ತಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ, ಬೆಳ್ಳಟ್ಟಿ ಶ್ರೀ ಬಸವರಾಜ ಸ್ವಾಮೀಜಿ, ಮಲ್ಲನಕೆರೆ ಶ್ರೀ ಗುರುಚನ್ನಬಸವ ಸ್ವಾಮೀಜಿ, ಲಿಂಗಾನಾಯಕನಹಳ್ಳಿ ಶ್ರೀ ಚನ್ನವೀರ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಗ್ರಾ.ಪಂ. ಅಧ್ಯಕ್ಷೆ ಹನುಮಂತಿಬಾಯಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಹೆಚ್.ಬಿ. ಪರುಶುರಾಮಪ್ಪ, ತಾ.ಪಂ. ಸದಸ್ಯ ಹುಲಿಕಟ್ಟಿ ಚಂದ್ರಪ್ಪ, ನೀಲಗುಂದ ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ಮಹೇಶಪ್ಪ, ಕಡಬಗೆರೆ ಗ್ರಾ.ಪಂ. ಅಧ್ಯಕ್ಷೆ ಅನುಷಾ ಮಂಜುನಾಥ, ನಂದಿಬೇವೂರು ಗ್ರಾ.ಪಂ. ಅಧ್ಯಕ್ಷೆ ಸುಶೀಲಮ್ಮ, ಉಪಾಧ್ಯಕ್ಷೆ ಲಕ್ಷ್ಮಿದೇವಿ, ಪುಷ್ಪಾ ದಿವಾಕರ್, ಹೆಚ್.ಎಂ.ಲಲಿತಮ್ಮ, ಕಂಚಿಕೇರಿ ಪಿ. ಜಯಲಕ್ಷ್ಮಿ, ಕವಿತಾ ಸುರೇಶ್, ಮೇಘರಾಜ್, ಕಾನಹಳ್ಳಿ ರುದ್ರಪ್ಪ, ಗೊಂಗಡಿ ಸಹನ ರಾಜಣ್ಣ, ಹಲುವಾಗಲು ರತ್ನಮ್ಮ, ರೇಣುಕಮ್ಮ, ವನಜಾಕ್ಷಮ್ಮ, ಉಮಾ ಶಂಕರ್, ಉದಯಶಂಕರ್, ಮತ್ತೂರು ಬಸವರಾಜ್, ಕಲ್ಲಹಳ್ಳಿ ಗೋಣೆಪ್ಪ, ಶಿವಪುತ್ರ, ಯರಬಾಳು ರುದ್ರಪ್ಪಇನ್ನಿತರರಿದ್ದರು.