ದಾವಣಗೆರೆ, ಮಾ. 12- `ಚಿರಂತನ’ ಸಂಸ್ಥೆಯಿಂದ ಮಹಿಳಾ ದಿನಾ ಚರಣೆ ಅಂಗವಾಗಿ ಗೋಡೆಗಳ ಮೇಲೆ ಪೇಟಿಂಗ್ ಮಾಡಿಸುವ ಮೂಲಕ ನಗರದ ಕಾಂಪೌಂಡ್ ಗೋಡೆಗಳ ಸೌಂದರ್ಯ ಹೆಚ್ಚಿಸುವ ಕಾರ್ಯಕ್ಕೆ ಮುಂದಾಗಿದೆ. ನಗರದ ಡಿ.ಆರ್.ಆರ್. ಪಾಲಿಟೆಕ್ನಿಕ್ ಕಾಲೇಜು ಗೋಡೆಗಳ ಮೇಲೆ ಸುಮಾರು ಹತ್ತು ಮಹಿಳಾ ಕಲಾವಿದರು ತಮ್ಮ ಕಲ್ಪನೆಯ ಚಿತ್ತಾರ ಬಿಡಿಸಿದ್ದಾರೆ.
ಮಹಿಳೆಯರಿಗೆ ಅಗತ್ಯವಾದ ಆತ್ಮವಿಶ್ವಾಸದ ನುಡಿಗಳನ್ನೊಳಗೊಂಡ ಚಿತ್ರಗಳು ನೋಡುಗರ ಮನ ಸೆಳೆಯುತ್ತಿವೆ.
ಚಿರಂತನದ ಈ ವಿಶೇಷ ಪ್ರಯತ್ನಕ್ಕೆ ಬಿಲ್ಡಿಂಗ್ ನೀಡ್ಸ್ ಮಾಲೀಕ ಶಂಭು ಉರೇಕೊಂಡಿ ಅವರು ಕಲಾವಿದರಿಗೆ ಬೇಕಾದ ಬಣ್ಣ, ಬ್ರಷ್ ಮುಂತಾದ ಸಾಮಗ್ರಿಗಳನ್ನು ನೀಡಿ ಸಹಕರಿಸಿದ್ದಾರೆ ಎಂದು ಚಿರಂತನ ಸಂಸ್ಥಾಪಕರಾದ ಶ್ರೀಮತಿ ಎನ್. ದೀಪಾ ಹೇಳಿದ್ದಾರೆ.
ಕಲಾವಿದೆಯರಾದ ಕೀರ್ತನ ಆಲ್ ಪೋನ್ಜ್, ಅಂಕಿ ಡಿ.ಎಸ್., ಇಂದೂ ಸಿ.ಹೆಚ್., ನಂದಿತಾ ಆರ್. ಕಟ್ಟೆ, ಪ್ರತಿಭಾ ನರಸಿಂಹನಾಯಕ್, ಅನುಷಾ ನರಸಿಂಹನಾಯಕ್, ಅರ್ಪಿತ ಆರ್., ಸ್ನೇಹ ಆರ್., ಮಧುಶ್ರೀ ಹಿ.ಅದಿತಿ, ಕೆ.ಪ್ರಕಾಶ್, ಬಸಮ್ಮ ಗೋಡೆಗಳಿಗೆ ಬಣ್ಣ ತುಂಬಿದವರು.
ಸ್ಥಳೀಯ ಮಹಿಳಾ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಚಿರಂತನದ ಉದ್ದೇಶವಾಗಿತ್ತು, ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಆಡಳಿತ ಮಂಡಳಿ ಇಂತಹ ಸ್ಥಳೀಯರನ್ನು ಬಳಸಿಕೊಂಡು ನಗರದಲ್ಲೆಡೆ ಚಿತ್ರ ಬಿಡಿಸುವ ಪ್ರಯತ್ನ ಮಾಡುವಂತೆ ಚಿರಂತನ ತಂಡ ವಿನಂತಿಸಿದೆ.