ಹೂವಿನಹಡಗಲಿ, ಜು.26- ವಿಧಿಬಲಿ ಕಿರು ಚಲನಚಿತ್ರದ ಮಹೂರ್ತ ಸಮಾರಂಭವು ಪಟ್ಟಣದ ನೀರಾವರಿ ಕಾಲೋನಿಯ ಗಣೇಶ ದೇವಸ್ಥಾನದಲ್ಲಿ ಇಂದು ಜರುಗಿತು. ಚೌಕಿಮಠದ ಸದ್ಗುರು ಗಾಡಿ ತಾತಾನವರು ಕ್ಲಾಪ್ ತೋರಿಸುವ ಮೂಲಕ ಚಾಲನೆ ನೀಡಿದರು. ನಿರ್ಮಾಪಕ ಎನ್.ಎಸ್.ಮಂಜುನಾಥ ಮತ್ತು ಪಿ.ವಿಜಯಕುಮಾರ್ ಕ್ಯಾಮೆರಾಕ್ಕೆ ಚಾಲನೆ ಮಾಡಿದರು.
ವೇದಿಕೆಯಲ್ಲಿ ಚಿತ್ರದ ನಿರ್ದೇಶಕ ಸಂದೀಪ ಡಾ.ಮಲ್ಲಿಕಾರ್ಜುನ್ ಗಾಡಿ, ನಾಯಕ ನಟ ಎಸ್.ಎನ್.ಕ್ರಾಂತಿ, ನಾಯಕಿ ನಟಿ ಅಶ್ವಿನಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ನಂತರ ಪಟ್ಟಣದ ಹೊರವಲಯದಲ್ಲಿ ಚಿತ್ರೀಕರಣ ಮುಂದುವರೆಯಿತು.