ಕೊರೊನಾ ನಿಯಮ ಪಾಲಿಸಿ ಹಬ್ಬ, ಉರುಸು ಆಚರಿಸಿ : ವೀರಬಸಪ್ಪ

ಮಲೇಬೆನ್ನೂರು, ಮಾ.9- ಹಬ್ಬ, ಜಾತ್ರೆ, ಉರುಸುಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಡಿ. ಕೊರೊನಾ ಬಗ್ಗೆ ನಿರ್ಲಕ್ಷ್ಯ ಬೇಡ, ಕೊರೊನಾ ಕಡಿಮೆ ಆಗಿದ್ದರೂ ಜಾಗೃತರಾಗಿರಿ ಎಂದು ಪಿಎಸ್‌ಐ ವೀರಬಸಪ್ಪ ಕುಸಲಾಪುರ ಹೇಳಿದರು.

ಅವರು ಮಂಗಳವಾರ ಸಂಜೆ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಮಹಾಶಿವರಾತ್ರಿ ಹಾಗೂ ಮುಸ್ಲಿಂ ಬಾಂಧವರ ಷಬ್‌ ಎ-ಬರಾತ್ ಹಬ್ಬಗಳ ಅಂಗವಾಗಿ ಕರೆದಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಈ ಎರಡು ಹಬ್ಬಗಳು ಒಂದೇ ದಿನ ಬಂದಿರುವುದರಿಂದ ಎಲ್ಲರೂ ಶಾಂತಿ, ಸುರಕ್ಷತೆ, ಸಾಮರಸ್ಯ ಕಾಪಾಡಬೇಕು. ಶಿವರಾತ್ರಿ ಜಾಗರಣೆ ಇರುವ ಪ್ರಯುಕ್ತ ರಾತ್ರಿ ಮಸೀದಿಗಳಲ್ಲಿ ನಡೆಸುವ ಪ್ರಾರ್ಥನೆ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ಒಂದೇ ಸಮಯಕ್ಕೆ ಮುಕ್ತಾಯ ಮಾಡಬೇಕೆಂದು ವೀರಬಸಪ್ಪ ತಿಳಿಸಿದರು.

ಕೋವಿಡ್‌-19 ಹಿನ್ನೆಲೆಯಲ್ಲಿ ನಿಯಮಗಳನ್ನು ಪಾಲನೆ ಮಾಡಬೇಕು, 60 ವರ್ಷ ಮೇಲ್ಪಟ್ಟವರನ್ನು ಮತ್ತು 10 ವರ್ಷದೊಳಗಿನ ಮಕ್ಕಳನ್ನು ಅನವಶ್ಯಕವಾಗಿ ಕರೆದುಕೊಂಡು ತಿರುಗಾಡಬೇಡಿ. ಹೆಚ್ಚು ಜನ ಒಂದೇ ಕಡೆ ಸೇರಬೇಡಿ ಎಂದು ವೀರಬಸಪ್ಪ ಮಾನವಿ ಮಾಡಿದರು.

ಪಟ್ಟಣದಲ್ಲಿ ಜಾತ್ರೆ, ಉರುಸು ಇರುವುದರಿಂದ ಒಂದೆರಡು ದಿನಗಳಲ್ಲಿ ಸಿಸಿ ಟಿವಿ ಕ್ಯಾಮರಾಗಳನ್ನು ರಿಪೇರಿ ಮಾಡಿಸಿಕೊಡುವಂತೆ ಪಿಎಸ್‌ಐ ವೀರಬಸಪ್ಪ ಅವರು ಕೇಳಿದಾಗ, ಸದಸ್ಯರಾದ ಯೂಸೂಫ್‌, ದಾದಾವಲಿ, ಎ.ಕೆ. ಲೋಕೇಶ್‌ ಮತ್ತು ಕೆ.ಜಿ. ಲೋಕೇಶ್‌ ಅವರು ಸಮ್ಮತಿ ಸೂಚಿಸಿದರು. 

ಮುಸ್ಲಿಂ ಸಮಾಜದ ಯುವ ಮುಖಂಡ ನಯಾಜ್‌, ಕೆ.ಜಿ. ಕೊಟ್ರೇಶಪ್ಪ, ಕೆ.ಜಿ. ಪರಮೇಶ್ವರಪ್ಪ, ಪಾನಿಪುರಿ ರಂಗನಾಥ್‌, ಸಿರಿಗೆರೆ ಕುಮಾರ್‌, ಬೆಣ್ಣೆಹಳ್ಳಿ ಸಿದ್ದೇಶ್‌, ಶೃತಿ ಶಾಮಿಯಾನ ಯೂಸೂಫ್‌ ಅಲಿ ಸೇರಿದಂತೆ, ವಿವಿಧ ಮಸೀದಿಗಳ ಮುತುವಲ್ಲಿಗಳು ಶಾಂತಿ ಸಭೆಯಲ್ಲಿ ಹಾಜರಿದ್ದರು.

ಎಎಸ್‌ಐ ಬಸವರಾಜಪ್ಪ ಸ್ವಾಗತಿಸಿದರು. ಶಶಿಕುಮಾರ್‌ ವಂದಿಸಿದರು.

error: Content is protected !!