ಕೂಡ್ಲಿಗಿ, ಮಾ.9- ಮಹಿಳಾ ದಿನಾಚರಣೆ ಅಂಗವಾಗಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಚೀಲ ಕ್ಯಾನ್ಸರ್ ಪತ್ತೆ, ಸ್ತನ ಕ್ಯಾನ್ಸರ್ ಪತ್ತೆ ಹಾಗೂ ಗರ್ಭಿಣಿಯರ ತಪಾಸಣೆ ಕಾರ್ಯಕ್ರಮದ ಉದ್ಘಾಟನೆಯನ್ನು ಪಟ್ಟಣ ಪಂಚಾಯ್ತಿ ಸದಸ್ಯೆ ರೇಣುಕಾ ಎಸ್. ದುರುಗೇಶ್ ನೆರವೇರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ವಿನಯ್ ಮುದೇಗೌಡ್ರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಶಾರದಾ ಬಾಯಿ, ವೈದ್ಯಾಧಿಕಾರಿ ಡಾ. ನಾಗರಾಜ್, ಸ್ತ್ರೀ ರೋಗ ತಜ್ಞೆ ಡಾ. ರೇಖಾ, ಶಸ್ತ್ರ ಚಿಕಿತ್ಸಕರಾದ ಡಾ. ಹೆಚ್.ಎಸ್. ಗುರು ನಾಥ್ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರಾದ ಕಾಲ್ಚಟಿ ಈಶಣ್ಣ, ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ಹಾಗೂ ದಲಿತ ಸಂಘಟನೆಯ ಜಿಲ್ಲಾ ಸಂಚಾಲಕ ಎಸ್. ದುರುಗೇಶ್, ದಂತ ವೈದ್ಯೆ ಡಾ. ನಂದಿನಿ , ಮಕ್ಕಳ ತಜ್ಞೆ ಡಾ. ಐಶ್ವರ್ಯ, ಆಸ್ಪತ್ರೆ ಸಿಬ್ಬಂದಿಗಳಾದ ಸುನೀಲ್ ಕುಮಾರ್ ಸಾತಿಹಾಳ್, ಅಂಗಡಿ ಮಹಾಂತೇಶ, ಸೋಮಶೇಖರ್, ಈಶಪ್ಪ, ಗಂಗಮ್ಮ, ವೇದಾವತಿ, ಗುರು ಬಸವರಾಜ, ಶುಶ್ರೂಷಾಧಿಕಾರಿಗಳು ಹಾಗೂ ಸಹಾಯಕ ಆಡಳಿತಾಧಿಕಾರಿ ಈರಣ್ಣ, ಕಛೇರಿ ಅಧೀಕ್ಷಕ ಕೆ.ಬಿ.ಎಂ. ವೀರಭದ್ರಯ್ಯ, ತಾಲ್ಲೂಕು ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಆಪ್ತ ಸಮಾಲೋಚಕರಾದ ನಾಗರತ್ನ ಸ್ವಾಗತಿಸಿದರು. ಓಬಣ್ಣ ವಂದಿಸಿದರು. ಕೆ. ಪ್ರಶಾಂತ ಕುಮಾರ್ ನಿರೂಪಿಸಿದರು. ವೇದಿಕೆ ಕಾರ್ಯಕ್ರಮದ ನಂತರ 160ಕ್ಕೂ ಹೆಚ್ಚು ಮಹಿಳೆಯರು ತಪಾಸಣೆ ಮಾಡಿಸಿಕೊಂಡರು.