ಹರಪನಹಳ್ಳಿ, ಜು.25- ಶಾಸಕ ಹಾಗೂ ಮಾಜಿ ಸಚಿವರೂ ಆದ ಪಿ.ಟಿ. ಪರಮೇಶ್ವರ ನಾಯ್ಕ್ ಅವರ 58ನೇ ಹುಟ್ಟು ಹಬ್ಬವನ್ನು ಹರಪನಹಳ್ಳಿ ಆಚಾರ್ಯ ಬಡಾವಣೆಯಲ್ಲಿ ಅವರ ನಿವಾಸದಲ್ಲಿ ಕೇಕ್ ಕತ್ತರಿಸಿ ಹಾಗೂ ಹಡಗಲಿ ಪಟ್ಟಣ ಮತ್ತು ತಾಲ್ಲೂಕಿನ ಹನಕನಹಳ್ಳಿ ಗ್ರಾಮದಲ್ಲಿ ಅವರ ಅಭಿಮಾನಿಗಳು 58 ಅರ್ಚಕ ದಂಪತಿಗಳಿಗೆ ಉಡುಗೊರೆ ನೀಡುವ ಮೂಲಕ ಭಾನುವಾರ ಅರ್ಥಪೂರ್ಣವಾಗಿ ಆಚರಿಸಿದರು.
ಕಾಂಗ್ರೆಸ್ ಯುವ ಮುಖಂಡ ಎಂ.ಬಿ.ಯಶವಂತಗೌಡ, ನ್ಯಾಯವಾದಿ ಮತ್ತಿಹಳ್ಳಿ ಅಜ್ಜಣ್ಣ, ಮುಖಂಡ ಹನಕನಹಳ್ಳಿ ಹಾಲೇಶ್ ಅವರುಗಳು ಮಾತನಾಡಿ, ಪರಮೇಶ್ವರನಾಯ್ಕ ಅವರ ಆರೋಗ್ಯ, ಆಯಸ್ಸು ವೃದ್ಧಿಸಲಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಆ ದೇವರು ಅವರಿಗೆ ಇನ್ನಷ್ಟು ಶಕ್ತಿ ನೀಡಲಿ ಎಂದರು.
ಈ ವೇಳೆ ಟಿಎಪಿಸಿಎಂಎಸ್ ಅಧ್ಯಕ್ಷ ಪ್ರೇಮಕುಮಾರ್ ಗೌಡ, ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಸಂಚಾಲಕ ಬಿ.ನಜೀರ್ ಅಹ್ಮದ್, ಮುಖಂಡರಾದ ತಿಮ್ಮಾನಾಯ್ಕ, ಹಾರಕನಾಳು ಪ್ರಕಾಶಗೌಡ, ಪೋತಲಕಟ್ಟಿ ನವೀನ್, ರಾಗಿರೊಟ್ಟಿ ಜಾಕೀರ್, ಹಡಗಲಿಯ ಬ್ಲಾಕ್ ಕಾಂಗ್ರೆಸ್ ಒಬಿಸಿ ಘಟಕದ ಅಧ್ಯಕ್ಷ ಶಿವಕುಮಾರಗೌಡ, ಆನಂದಪ್ಪ, ತಾಳೇದಹಳ್ಳಿ ಹನುಮಂತಪ್ಪ, ಜಾಡ್ರ ಕೊಟ್ರೇಶಪ್ಪ, ಹಣ್ಣಿ ಬಸವನಗೌಡ ಮತ್ತು ಇತರರು ಉಪಸ್ಥಿತರಿದ್ದರು.