ಹರಿಹರದಲ್ಲಿ ಶ್ರೀ ಶಾರದೇಶಾನಂದ ಜೀ ಕಿವಿಮಾತು
ಹರಿಹರ, ಮಾ.8- ಸಮಾಜದಲ್ಲಿ ಮಹಿಳೆ ಯರು ಅಸೂಯೆ, ಹೊಟ್ಟೆಕಿಚ್ಚಿನ ಭಾವನೆ ಗಳನ್ನು ಬಿಟ್ಟರೆ ಸಾವಿತ್ರಿ ಬಾಯಿ ಫುಲೆ, ಶಾರದಾ ದೇವಿಯಂತೆ ಬೆಳವಣಿಗೆಯ ಹಾದಿ ಯಲ್ಲಿ ಸಾಗುವುದಕ್ಕೆ ದಾರಿಯಾಗುತ್ತದೆ ಎಂದು ರಾಮಕೃಷ್ಣ ಆಶ್ರಮದ ಶ್ರೀ ಶಾರದೇಶಾನಂದ ಸ್ವಾಮಿಗಳು ಕಿವಿ ಮಾತು ಹೇಳಿದರು.
ನಗರದ ರಾಜಾರಾಮ ಕಾಲೋನಿ ಶ್ರೀರಾಮ ಮಂದಿರದ ಸಭಾಂಗಣದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವ ಸಹಾಯ ಸಂಘದ ವತಿಯಿಂದ ನಡೆದ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ಮತ್ತು §ನಮ್ಮೊಳಗಿನ ಮಹಿಳಾ ಸಾಧಕಿಯರು¬ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ಮನಸ್ಸು ಮಾನಸಿಕವಾಗಿ ಜೀರ್ಣ ವಾಗದೆ ಇದ್ದಾಗ ಅಸೂಯೆ ಹೊಟ್ಟೆಕಿಚ್ಚಿನ ಭಾವನೆಗಳು ಹುಟ್ಟಿ ಇದರಿಂದಾಗಿ ಮನಸ್ಸಿನಲ್ಲಿ ಕೆಟ್ಟದಾಗಿ ಆಲೋಚನೆ ಬರುವುದಕ್ಕೆ ದಾರಿಯಾಗುತ್ತದೆ. ಮಹಿಳೆ ಯರು ಸ್ವಾಭಿಮಾನ ದಿಂದ ಬದುಕಿ ದಾಗ ಬದುಕಿಗೊಂದು ಪ್ರೇರಣೆ ಸಿಗುತ್ತದೆ. ಇನ್ನೊಬ್ಬರ ಬದುಕನ್ನು ನೋಡಿ ಹೋಲಿಕೆ ಮಾಡಿಕೊಂಡು ಬದುಕುವುದಕ್ಕಿಂತ ನಮಗೆ ನಾವೇ ಸಾಟಿ ಅನ್ನುವ ತರಹದಲ್ಲಿ ಬದುಕಿದಾಗ ಜ್ಞಾನದ ಬೆಳಕಿನಲ್ಲಿ ಬದುಕಲಿಕ್ಕೆ ಸಾಧ್ಯವಾಗು ತ್ತದೆ. ಇದ ರಿಂದಾಗಿ ಸಮಾಜದಲ್ಲಿ ಗೌರವ ಸ್ಥಾನ ಮಾನಗಳನ್ನು ಗಳಿಸಬಹುದು ಎಂದರು.
ಧರ್ಮಸ್ಥಳ ಸ್ವ ಸಹಾಯ ಸಂಘದ ಜಿಲ್ಲಾ ನಿರ್ದೇಶಕ ಜಯಂತ್ ಪೂಜಾರಿ ಮಾತನಾಡಿ, ಶ್ರೀ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘವು 1982 ರಂದು ಹುಟ್ಟಿಕೊಂಡು ಪ್ರಗತಿ ಬಂಧು ಯೋಜನೆ ಮೂಲಕ ಹಲವಾರು ಸಮಾಜಮುಖಿ ಕೆಲಸ ಮಾಡುತ್ತಾ ಬಂದಿದ್ದು, ಅದರ ಜೊತೆಗೆ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸಲು ಮಹಿಳಾ ಸ್ವ ಸಹಾಯ ಸಂಘವನ್ನು ಮಾಡಿದ್ದು ದಾವಣಗೆರೆ ಜಿಲ್ಲೆಯಲ್ಲಿ 20 ಸಾವಿರ ಮತ್ತು ಹರಿಹರ ನಗರದಲ್ಲಿ 4600 ಸ್ವ ಸಹಾಯ ಸಂಘಗಳನ್ನು ರಚಿಸಿ ಸುಮಾರು 1.98 ಸಾವಿರ ಸದಸ್ಯರು ಮಹಿಳೆಯರ ಪ್ರಗತಿಗೆ ಪೂರಕ ಕೆಲಸ ಮಾಡುತ್ತಾ ಬಂದಿದ್ದಾರೆ ಎಂದರು.
ದಾವಣಗೆರೆಯ ಜ್ಯೋತಿ ಜಂಬಗಿ ಮಾತ ನಾಡಿ ಸರ್ಕಾರವು ಮಹಿಳೆಯರ ಪ್ರಗತಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ಸಮಾಜದಲ್ಲಿ ಆತ್ಮವಿಶ್ವಾಸ ದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು. ವಕೀಲರಾದ ಶೋಭಾ, ಹರಿಹರದ ಧರ್ಮಸ್ಥಳ ಯೋಜನಾಧಿಕಾರಿ ಗಣಪತಿ ಮಾಲಂಜೆ, ಮಂಜುಳಾ ಮಾತನಾಡಿದರು.
ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ನಗರಸಭೆ ಸದಸ್ಯೆ ನೀತಾ ಮೆಹರ್ವಾಡೆ, ರಂಗಪ್ಪ, ಸಂಗೀತ ಪೂಜಾರ್, ಮಂಜುಳಾ, ನಯನ ಇನ್ನಿತರರಿದ್ದರು.