ಹರಪನಹಳ್ಳಿ,ಜು. 28- ಪಟ್ಟಣದಲ್ಲಿ ನಿವೃತ್ತ ಸೈನಿಕರು ಹಾಗೂ ಇತ ರರು ಸೇರಿ ಕಾರ್ಗಿಲ್ ವಿಜಯೋತ್ಸವ ಆಚರಿಸಿದರು. ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಭಾರತಾಂಬೆಯ ಭಾವಚಿತ್ರದ ಮೆರವಣಿಗೆ ಹೊರಟು ಹೊಸ ಬಸ್ ನಿಲ್ದಾಣದ ಇಜಾರಿ ಶಿರಸಪ್ಪ ವೃತ್ತದಲ್ಲಿ ಕೊನೆಗೊಂಡಿತು.
ಇಜಾರಿ ಶಿರಸಪ್ಪ ವೃತ್ತದಲ್ಲಿ ಭಾರತ ಮಾತೆಗೆ ಹಾರ ಹಾಕಿ ಕ್ಯಾಂಡಲ್ ಬೆಳಗಿ ಜಯಘೋಷ ಮೊಳಗಿಸಿದರು. ಪೊಲೀಸ್ ವೃತ್ತ ನಿರೀಕ್ಷಕ ನಾಗರಾಜ ಎಂ.ಕಮ್ಮಾರ ಮೆರವಣಿಗೆಗೆ ಚಾಲನೆ ನೀಡಿದರು. ಕಾರ್ಗಿಲ್ ಯೋಧ ಪಿ. ರೇಖಪ್ಪ, ಯೋಧ ಬಾಣದ ವೆಂಕಟೇಶ, ಮುಖಂಡರಾದ ದೇವೇಂದ್ರಪ್ಪ, ಸುರೇಂದ್ರ ಮಂಚಾಲಿ, ಮಲ್ಲಿಕಾರ್ಜುನ, ಪೂಜಾರ್ ವಾಗೀಶ, ಮಂಜುನಾಥ, ಬಸವಚಾರಿ ಮತ್ತಿತರರು ಉಪಸ್ಥಿತರಿದ್ದರು.