ಮಲೇಬೆನ್ನೂರಿನಲ್ಲಿ ಟೆಸ್ಟಿಗೆ ಸಂಪರ್ಕಿತರ ಹಿಂದೇಟು : ಅಧಿಕಾರಿಗಳಿಂದ ಮನವೊಲಿಕೆ

ಮಲೇಬೆನ್ನೂರು, ಮೇ 6- ಪಟ್ಟಣದ 8ನೇ ವಾರ್ಡ್‌ನಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರು ಗಂಟಲು ದ್ರವ ಪರೀಕ್ಷೆಗೆ ಹಿಂದೇಟು ಹಾಕಿದ್ದರಿಂದ ಅಧಿಕಾರಿಗಳು ಅವರ ಮನವೊಲಿಸಲು ಹರಸಾಹಸಪಟ್ಟರು.

ಮನವೊಲಿಕೆಗೆ ಬಗ್ಗದಿದ್ದಾಗ ರೇಷನ್ ಸ್ಥಗಿತ ಮಾಡಿಸುತ್ತೇವೆ ಎಂದು ಹೇಳಿದಾಗ ಸುಮಾರು 20 ಜನರು ಕೋವಿಡ್ ಟೆಸ್ಟ್ ಮಾಡಿಸಿಕೊಂಡರು.

ಮನವಿ : ಕೊರೊನಾ ಸೋಂಕಿತ ವ್ಯಕ್ತಿಯ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರು ಕೋವಿಡ್ ಟೆಸ್ಟ್ ಮಾಡಿಸಿಕೊಂಡರೆ ಮಾತ್ರ ಕೊರೊನಾ ಚೈನ್ ಲಿಂಕ್ ತಪ್ಪಿಸಬಹುದು. ಇಲ್ಲದ್ದಿದ್ದರೆ ಅದು ಬೆಳೆಯುತ್ತಲೇ ಇರುತ್ತದೆ ಎಂದು ಉಪತಹಶೀಲ್ದಾರ್ ಆರ್.ರವಿ ಜನರಲ್ಲಿ ಮನವಿ ಮಾಡಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ದಿನಕರ್ ಪುರಸಭೆ ಅಧಿಕಾರಿಗಳಾದ ಉಮೇಶ್, ಗುರುಪ್ರಸಾದ್, ನವೀನ್, ಪ್ರಭು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಈ ವೇಳೆ ಹಾಜರಿದ್ದರು.

77 ಜನರಿಗೆ ಸೋಂಕು : ಬುಧವಾರ ಹರಿಹರ ತಾಲ್ಲೂಕಿನಲ್ಲಿ 77 ಜನರಿಗೆ ಸೋಂಕು ದೃಢಪಟ್ಟಿದ್ದು, ಇದರಲ್ಲಿ ಮಲೇಬೆನ್ನೂರು ಹೋಬಳಿಯ 20 ಜನರು ಇದ್ದಾರೆ. ಹೊಳೆಸಿರಿಗೆರೆ ಗ್ರಾಮದ 60 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ದಾವಣಗೆರೆ ಸಿಜಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

error: Content is protected !!