ಹರಿಹರದಲ್ಲಿ ಆದಿಜಾಂಬವ ಪೀಠದ ಷಡಕ್ಷರಮುನಿ ದೇಶೀಕೇಂದ್ರ ಶ್ರೀ
ಹರಿಹರ, ಮಾ.7- ರಾಜಧಾನಿ ಬೆಂಗ ಳೂರಿಗೆ ಹೆಜ್ಜೆ ಹಾಕಲು ನಾನು ಸಮಾಜ ದವರ ಜೊತೆಗೆ ಹೋಗುವುದಕ್ಕೆ ಸಿದ್ದನಿದ್ದು, ನನ್ನೊಡನೆ ನೀವೆಲ್ಲರೂ ಹೆಜ್ಜೆ ಹಾಕಿದಾಗ ಮಾತ್ರ ನಮ್ಮ ಹೋರಾಟಕ್ಕೆ ಖಂಡಿತವಾಗಿ ಫಲವನ್ನು ಪಡೆಯಬಹುದು ಎಂದು ಆದಿಜಾಂಬವ ಪೀಠದ ಷಡಕ್ಷರ ಮುನಿ ದೇಶಿಕೇಂದ್ರ ಶ್ರೀಗಳು ಹೇಳಿದರು.
ನಗರದ ರಚನಾ ಕ್ರೀಡಾ ಸಭಾಂಗಣ ದಲ್ಲಿ ನಡೆದ ಮಾದಿಗ ಸಮಾಜದ ಪ್ರಮುಖ ಬೇಡಿಕೆಯಾದ ನ್ಯಾ.ಸದಾಶಿವ ಆಯೋಗದ ವರದಿ ಜಾರಿಗಾಗಿ ಸರ್ಕಾರವನ್ನು ಒತ್ತಾಯಿಸಲು ಹಮ್ಮಿಕೊಂಡಿರುವ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿಯನ್ನು ಜಾರಿ ಮಾಡುವ ತನಕ ನಮ್ಮ ಹೋರಾಟ ನಿಲ್ಲಬಾರದು. ನಮ್ಮ ಸಮಾಜ ಮುಖ್ಯವಾಹಿನಿಗೆ ಬರಲು ಕೆಲವು ಸಮಾಜಗಳು ಅಡ್ಡಗಾಲಾಗಿವೆ. ಈ ಕಾಲೆಳೆಯುವ ಸಮಾಜ ಮತ್ತು ಜನರ ಮಧ್ಯೆ ನಮ್ಮ ಹೋರಾಟ ಗೆಲ್ಲಬೇಕು ಎಂದರು.
ಪಾದಯಾತ್ರೆಯನ್ನು ಹರಿಹರದಿಂದಲೇ ಪ್ರಾರಂಭ ಮಾಡುತ್ತೇವೆ. ಸಮಾಜದ ಗಣ್ಯರು, ಮುಖಂಡರು, ಸಚಿವರು, ಶಾಸಕರುಗಳ ಸಭೆಯನ್ನು ಶೀಘ್ರದಲ್ಲಿ ಕರೆದು ಒಂದು ಸ್ಪಷ್ಟವಾದ ತೀರ್ಮಾನಕ್ಕೆ ಬಂದು ದಿನಾಂಕವನ್ನು ಶೀಘ್ರದಲ್ಲಿ ತಿಳಿಸ ಲಾಗುವುದು. ಅಲ್ಲಿಯವರೆಗೆ ತಾಲ್ಲೂಕಿನ ಮುಖಂಡರೆಲ್ಲರೂ ಹಳ್ಳಿ ಹಳ್ಳಿಗಳನ್ನು ಸುತ್ತಿ ಪಾದಯಾತ್ರೆಯ ಬಗ್ಗೆ ವಿವರವಾದ ಮಾಹಿತಿ ತಿಳಿಸಿ, ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ನನ್ನ ತಂದೆಯವರ ಕಾಲದಿಂದಲೂ ನನಗೆ ಹೆಸರು ಹಾಗೂ ಸ್ಥಾನಮಾನ ನೀಡಿದ ಹರಿಹರ ಕ್ಷೇತ್ರದಿಂದ ಲಭಿಸಿ ರುತ್ತದೆ ಮತ್ತು ಇಲ್ಲಿನ ಗಟ್ಟಿತನದ ಜನರು ನನಗೆ ಯಾವಾ ಗಲೂ ಬೆಂಗಾವಲಾಗಿದ್ದಾರೆ. ಆ ನಿಟ್ಟಿನಲ್ಲಿ ನನ್ನ ಹೋರಾಟ ಈ ಪುಣ್ಯ ಕ್ಷೇತ್ರದಿಂದಲೇ ಪ್ರಾರಂಭವಾಗುತ್ತದೆ. ಎಲ್ಲರೂ ಈ ಹೋ ರಾಟಕ್ಕೆ ಸಿದ್ದರಾಗಿ ಎಂದು ಕರೆ ನೀಡಿದರು.
ಪಾದಯಾತ್ರೆಗೂ ಮುಂಚೆ ಹರಿಹರ ತಾಲ್ಲೂಕಿನ ಪ್ರತಿಯೊಂದು ಹಳ್ಳಿಗಳಿಗೆ ಭೇಟಿ ನೀಡಿ ಸಮಾಜದ ಜನರನ್ನು ಈ ಪಾದಯಾತ್ರೆಗೆ ಆಗಮಿಸುವಂತೆ ಕೇಳಿಕೊಳ್ಳುವುದಾಗಿ ಹೇಳಿದರು.
ಹಾವೇರಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ಇತರರು ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಎನ್.ರಜನಿಕಾಂತ್, ಸುರೇಶ್ ತೆರೆದಹಳ್ಳಿ, ಗ್ರಾ.ಪಂ ಸದಸ್ಯರಾದ ಸಿದ್ಧಾರೂಢ, ನಾಗೇಂದ್ರಪ್ಪ, ಪರಸಪ್ಪ, ಮುಖಂಡರುಗಳಾದ ಹೆಚ್.ನಿಜಗುಣ, ಎಲ್.ಬಿ.ಹನುಮಂತಪ್ಪ, ಹೆಚ್ ಮಲ್ಲೇಶ್, ಕೆ.ಮರಿದೇವ, ನಿರಂಜನಮೂರ್ತಿ, ಸುರೇಶ್ ವಾಸನ, ಬ್ಯಾಂಕ್ ಬಸವರಾಜ್, ಎ.ಕೆ.ಮಂಜಪ್ಪ, ಸಂತೋಷ್, ಎಂ.ಎಸ್.ಆನಂದ್ ಕುಮಾರ್, ಪ್ರಭಾಕರ್, ವಿಶ್ವನಾಥ್, ಮಂಜುನಾಥ್ ರಾಜನಹಳ್ಳಿ, ಪಿ.ಜೆ.ಮಹಾಂತೇಶ್, ದಾವಣಗೆರೆ ತಿಪ್ಪೇಶ್, ಸೊಸೈಟಿ ಡಿ.ಹನುಮಂತಪ್ಪ, ಎಸ್.ಕೇಶವ, ಹಳ್ಳಿಯಾಳ ಚಂದ್ರಶೇಖರ್, ಸುಭಾಷ್ ಚಂದ್ರ ಬೋಸ್, ಹೆಚ್.ಸುಧಾಕರ್ ಹಾಗೂ ಇತರರು ಹಾಜರಿದ್ದರು.