ಹೊನ್ನಾಳಿ, ಜು.22 – ತಾಲ್ಲೂಕಿನಲ್ಲಿ ಸುರಿಯುತ್ತಿರುವ ಹೆಚ್ಚು ಮಳೆಯಿಂದಾಗಿ ಈವರೆಗೂ 17 ಮನೆಗಳಿಗೆ ಹಾನಿ ಸಂಭವಿಸಿರುವುದಾಗಿ ತಹಶೀಲ್ದಾರ್ ಬಸವನ ಗೌಡ ಕೋಟೂರ ತಿಳಿಸಿದ್ದಾರೆ.
ಕಚ್ಚಾ ಮನೆಗಳು 14, ಪಕ್ಕ ಮನೆಗಳು 3 ಹಾನಿಯಿಂದಾಗಿ ಅಂದಾಜು 14 ಲಕ್ಷದ 20 ಸಾವಿರ ರೂಗಳ ನಷ್ಟ ಆಗಿರುವುದಾಗಿ ತಿಳಿಸಿದರು.
ತುಂಗಭದ್ರಾ ನದಿಯ ನೀರಿನ ಮಟ್ಟ ಇಂದು 8 ಮೀ. ಇದ್ದು 12 ಮೀ. ಅಪಾಯ ಮಟ್ಟವಾಗಿದೆ. ದಿನದಿಂದ ದಿನಕ್ಕೆ ನದಿ ಅಪಾಯ ಮಟ್ಟ ಹೆಚ್ಚುತ್ತಿ ರುವುದನ್ನು ತಹಶೀಲ್ದಾರ್ ಪರಿಶೀಲನೆ ನಡೆಸಿದರು. ನದಿ ಪಾತ್ರದ ಹಳ್ಳಿಗಳಲ್ಲಿನ ಜನರಿಗೆ ಡಂಗೂರ ಹಾಗು ಪ್ರಚಾರದ ಮೂಲಕ ಎಚ್ಚರಿಕೆ ನೀಡಲಾಗಿದೆ.
ಅಗತ್ಯ ಬಿದ್ದರೆ ಮುಂಜಾಗ್ರತೆಗಾಗಿ ಪಟ್ಟಣದ ಅಂಬೇಡ್ಕರ ಭವನವನ್ನು ಗಂಜಿ ಕೇಂದ್ರವನ್ನಾಗಿ ತೆರೆಯಲು ಎಲ್ಲ ಸಿದ್ದತೆಗಳನ್ನು ತಾಲ್ಲೂಕು ಆಡಳಿತ ಹಮ್ಮಿಕೊಂಡಿದೆ ಎಂದು ವಿವರಿಸಿದರು.