ದಾವಣಗೆರೆ, ಮೇ 4- ಕೋವಿಡ್ನಿಂದ ಬಡವರು ಹಾಗು ಕೂಲಿನಾಲಿ ಮಾಡುವವರ ಜೀವನ ಸಂಕಷ್ಟದ ಲ್ಲಿದ್ದು, ಕರುಣಾ ಟ್ರಸ್ಟ್ ವತಿಯಿಂದ ಪ್ರತಿದಿನ 250 ಜನ ಬಡವರಿಗೆ ಅವರು ಇದ್ದಲ್ಲಿಯೇ ತೆರಳಿ ಒಂದು ಹೊತ್ತಿನ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಮಾಜಿ ಎಂಎಲ್ಸಿ ಮುದೇಗೌಡ್ರ ವೀರಭದ್ರಪ್ಪನವರು ದಿನಕ್ಕೆ 5,000 ರೂಪಾಯಿಯಂತೆ 5 ದಿನಗಳ ಕಾಲ ಊಟ ಒದಗಿಸಲು ಟ್ರಸ್ಟ್ಗೆ ಧನ ಸಹಾಯ ಮಾಡಿದ್ದಾರೆ. ಟ್ರಸ್ಟ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತದೆ. ಊಟ ತಯಾರು ಮಾಡಿ ಟ್ರಸ್ಟ್ಗೆ ನೀಡುವಲ್ಲಿ ಸ್ಫೂರ್ತಿ ಸೇವಾ ಟ್ರಸ್ಟ್ನ ಸತ್ಯನಾರಾಯಣ್ ಅವರು ಪ್ರಮುಖ ಪಾತ್ರವಹಿಸಿದ್ದು, ಟ್ರಸ್ಟ್ ಅವರಿಗೂ ಕೃತಜ್ಞತೆ ಸಲ್ಲಿಸುತ್ತದೆ ಎಂದು ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ತಿಳಿಸಿದ್ದಾರೆ.
ಧನ ಸಹಾಯವಿತ್ತು ಸಹಕರಿಸುವವರು ಟ್ರಸ್ಟಿನ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು. ಒಂದು ದಿನಕ್ಕೆ 250 ಜನರಿಗೆ ಊಟ ಒದಗಿಸಲು 5,000 ರೂಪಾಯಿ ಆಗಲಿದ್ದು, ದಾನಿಗಳು ಅದಕ್ಕಿಂತ ಹೆಚ್ಚು ಅಥವಾ ಕಡಿಮೆ ಹಣವನ್ನು ಸಹ ನೀಡಿ ರಶೀದಿ ಪಡೆಯಬಹುದು. ಕರೆ ಮಾಡಿದಲ್ಲಿ ಮನೆಗೇ ಬಂದು ಹಣ ಸ್ವೀಕರಿಸಲಾಗುವುದು.
ಹೆಚ್ಚಿನ ಮಾಹಿತಿಗೆ ವೀಣಾ ವ್ಯವಸ್ಥಾಪಕರು, ಮೊ: 9110455199 ಸಂಪರ್ಕಿಸುವುದು. ಅಥವಾ ಹಣವನ್ನು ಬ್ಯಾಂಕಿನ ಖಾತೆಗೂ ಜಮಾ ಮಾಡಬಹುದು. Karuna jeeva kalyana trust. Davanagere, AC no. 50100332805356, Ifsc HDFC 0000403, HDFC bank, Hemareddy complex boys hostel road Davanagere.