ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣದ ಕಾರ್ಯಕಾರಿಣಿ ಸಭೆಯಲ್ಲಿ ವೀರೇಶ್ ಹನಗವಾಡಿ
ದಾವಣಗೆರೆ, ಮಾ. 5- ಭಾರತೀಯ ಜನತಾ ಪಕ್ಷದ ಸಾಮಾಜಿಕ ಜಾಲತಾಣ ಇಂದಿನ ದಿನಗಳಲ್ಲಿ ಪ್ರಮುಖ ಮಾಧ್ಯಮವಾಗಿ ಹೊರಹೊಮ್ಮಿದೆ. ಸಾಮಾಜಿಕ ಜಾಲತಾಣ ದಿಂದ ಪಕ್ಷಕ್ಕೆ ಯಶಸ್ಸು ಮತ್ತು ಹೆಚ್ಚಿನ ಪ್ರಚಾರವನ್ನು ನೀಡುತ್ತಿದ್ದು, ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಶಯದಂತೆ ವಿಶ್ವ ಗುರುವನ್ನಾಗಿ ಮಾಡುವಲ್ಲಿ ಅತ್ಯಂತ ಪ್ರಮುಖವಾಗಿದ್ದು, ಇದರ ಪ್ರಚಾರ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿದೆ. ಇಂದು ಪ್ರತೀ ಗ್ರಾಮಗಳಲ್ಲೂ ಸಹ ಸಾಮಾಜಿಕ ಜಾಲತಾಣದ ಛಾಪು ಮೂಡಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ತಿಳಿಸಿದರು.
ಅವರು ನಗರದಲ್ಲಿ ನಡೆದ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸಾಮಾಜಿಕ ಜಾಲತಾಣ ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ನಾಗೂರ್ ಮಾತನಾಡಿ, ಬಿಜೆಪಿಯಲ್ಲಿ ಸಾಮಾಜಿಕ ಜಾಲತಾಣವನ್ನು ಹೆಚ್ಚಿನ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಳ್ಳುವ ವಿಷಯ ತಿಳಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಮಾತನಾಡಿ, ಬಿಜೆಪಿಯಲ್ಲಿ ಸಾಮಾಜಿಕ ಜಾಲತಾಣಗಳ ತಂಡ ರಚನೆ ಮತ್ತು ಕಾರ್ಯವ್ಯಾಪ್ತಿಯನ್ನು ತಿಳಿಸಿದರು.
ದಾವಣಗೆರೆ ಜಿಲ್ಲಾ ಸಾಮಾಜಿಕ ಜಾಲ ತಾಣ ಸಂಚಾಲಕ ಜಿ. ಕೊಟ್ರೇಶ್ ಗೌಡ ಅಧ್ಯ ಕ್ಷತೆ ವಹಿಸಿದ್ದರು. ಜಿಲ್ಲಾ ಮಾಧ್ಯಮ ಪ್ರಮುಖರಾದ ಹೆಚ್.ಪಿ. ವಿಶ್ವಾಸ್, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೊಕ್ಕೆ ನಾಗರಾಜ್, ಸಹಸಂಚಾಲಕ ರಾಜೇಶ್ ವೆರ್ಣೇಕರ್, ಮಂಜುನಾಥ್ ಗುತ್ತೂರು, ಶ್ರೀನಿವಾಸ್ ಪೂಜಾರ್, ಲಿಂಗರಾಜ್, ಪುಷ್ಪ ವಾಲಿ, ಕೆ.ಪಿ ನಾಗರಾಜ್, ಹರೀಶ್, ಸಂತೋಷ್, ವಿನಯ್, ಹರ್ಷ ಬಿಳಚೋಡು, ಉಮೇಶ್, ಮಮತಾ ಗೌಡ್ರು, ರೂಪಾ, ನವ್ಯ, ಕವಿತಾ ಮತ್ತು ಮಂಡಲದ ಸಂಚಾಲಕರು ಹಾಗೂ ಸಹ ಸಂಚಾಲಕರು ಉಪಸ್ಥಿತರಿದ್ದರು.