ದಾವಣಗೆರೆ, ಮೇ 2- ನಗರದ ನೃತ್ಯಶಾಲೆ ನಮನ ಅಕಾಡೆಮಿಯಿಂದ ನೃತ್ಯ ದಿನಾಚರಣೆ ಪ್ರಯುಕ್ತ ನೃತ್ಯಾರ್ಪಣ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೊರೊನಾ ನಿಯಮಾವಳಿ ಅನುಸರಿಸಿ ಅಕಾಡೆಮಿಯ ಕಾರ್ಯದರ್ಶಿ ಹಾಗೂ ನೃತ್ಯ ಗುರು ಶ್ರೀಮತಿ ಮಾಧವಿ ಡಿ.ಕೆ. ಅವರ ನೇತೃತ್ವದಲ್ಲಿ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳ ಪ್ರೋತ್ಸಾಹದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಮನ ಅಕಾಡೆಮಿಯ ನಿರ್ದೇಶಕರೂ ಆದ ಪಾಲಿಕೆಯ ಮಾಜಿ ಸದಸ್ಯ ದಿನೇಶ್ ಕೆ. ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಗರ ಪಾಲಿಕೆ ಸದಸ್ಯ ಮಂಜುನಾಥ್ ಗಡಿಗುಡಾಳ್, ಅಕಾಡೆಮಿಯ ನಿರ್ದೇಶಕರಾದ ರಾಮನಾಥ್ ಪಿ.ಸಿ., ಅನಿಲ್ ಬಾರೆಂಗಳ್, ಅಧ್ಯಕ್ಷ ಕೆ.ಎನ್. ಗೋಪಾಲಕೃಷ್ಣ ಉಪಸ್ಥಿತರಿದ್ದರು.
ನೃತ್ಯಪಟುಗಳಾದ ಭೂಮಿಕಾ ಎಸ್. ಕಠಾರೆ, ಮನ್ವಿತಾ ಎ.ವಿ., ನೀಲು ಎಸ್. ಅರೋರ್, ಪರಿಣಿಕಾ ಕೆ.ವಿ., ಸಂಜನಾ ಎಸ್., ಕು. ಯಕ್ಷ ಎಸ್. ಕಠಾರೆ, ಚತುರಶ್ರ ಅಲರಿಪು, ಸರಸ್ವತಿ ಭಜನ್, ನವಿಲು ನೃತ್ಯ, ಮಹಾಲಕ್ಷ್ಮಿ ಕೌತ್ವಂ, ತಿಲ್ಲಾನ ನೃತ್ಯರೂಪಕ ಪ್ರದರ್ಶಿಸಿದರು.
ಅಕಾಡೆಮಿಯ ವಿದ್ಯಾರ್ಥಿಗಳಾದ ಕು. ಪ್ರಿಯಾ ತಿಪ್ಪೇಸ್ವಾಮಿ, ಕು. ರೋಷನಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಮಾಧವಿ ಡಿ.ಕೆ. ವಂದಿಸಿದರು.