ರಾಣೇಬೆನ್ನೂರು ತಾ.ನಲ್ಲಿ ಸರಳ ಮದುವೆ : ಧರ್ಮಸ್ಥಳದ ಕೊಡುಗೆ

ರಾಣೇಬೆನ್ನೂರು, ಮೇ 2- ನಿಟ್ಟೂರು ಗ್ರಾಮದ ಬಸವರಾಜ ಹಾಗೂ ಅನ್ನಪೂರ್ಣ ಜೋಡಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ ವಿವಾಹವಾಗಲು ತಮ್ಮ ಹೆಸರನ್ನು ಈ ವರ್ಷ ನೋಂದಾಯಿಸಿಕೊಂಡಿದ್ದು,  ಕೊರೊನಾ ಹಿನ್ನಲೆಯಲ್ಲಿ ಸಾಮೂಹಿಕ ವಿವಾಹ ಧರ್ಮಸ್ಥಳದಲ್ಲಿ ರದ್ದಾಗಿರುವ ಕಾರಣ ವಧು-ವರರ ಒಪ್ಪಿಗೆಯಂತೆ ಅವರ ಸ್ವಗ್ರಾಮದಲ್ಲಿ ನೇರವೇರಿಸಲಾಯಿತು.

ತಾಲ್ಲೂಕಿನ ಯೋಜನಾಧಿಕಾರಿಗಳಾದ ಸತೀಶ್ ಶೇಟ್ ಶ್ರೀ ಕ್ಷೇತ್ರದ ಉಡುಗೊರೆಯಾದ ವಧು ಹಾಗೂ ವರನಿಗೆ ಬಟ್ಟೆ, ಮಂಜುನಾಥ ಸ್ವಾಮಿ ಡಾಲರ್,  ಮಂಗಳ ಸೂತ್ರ, ಹತ್ತು ಸಾವಿರ ಸಹಾಯ ಧನ ಕೊಟ್ಟು ಶುಭಾಶಯ ತಿಳಿಸಿದರು. ರಾಜ್ಯದಲ್ಲಿ ಒಟ್ಟು 131 ಜೋಡಿಗಳು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಹೆಸರನ್ನು ನೋಂದಾಯಿಸಿ ಕೊಂಡಿದ್ದು, ಕೋವಿಡ್ ಮಾರ್ಗ ಸೂಚಿ ಪಾಲಿಸಿ ಪೂಜ್ಯರ ಮಾರ್ಗ ದರ್ಶನದಲ್ಲಿ ಸ್ಥಳೀಯವಾಗಿ ಅವರವರ ಮನೆ ಅಥವಾ ದೇವಸ್ಥಾನದಲ್ಲಿ ಈ ವರ್ಷ ನಡೆಸಲು ತೀರ್ಮಾನ ಮಾಡಲಾಗಿತ್ತು. ಅದರಂತೆ ವಿವಾಹ ನೇರವೇರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!