ಹೊನ್ನಾಳಿ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಚಂದ್ರಪ್ಪ
ಹೊನ್ನಾಳಿ, ಮೇ 2- ದೇಶದ ಯಾವುದೇ ಪ್ರಜೆಯು ಮುಂಬರುವ ದಿನಗಳಲ್ಲಿ ಅಂತರ ರಾಜ್ಯ, ವಿದೇಶ ಪ್ರವಾಸಕ್ಕೆ ತೆರಳಲು 2ನೇ ಲಸಿಕೆಯೊಂದಿಗೆ ಪಡೆದ ಪ್ರಮಾಣ ಪತ್ರವು ಅವಶ್ಯಕವಾಗಿದೆ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಚಂದ್ರಪ್ಪ ಹೇಳಿದರು.
ಅವರು ಹೊನ್ನಾಳಿ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ 2ನೇ ಲಸಿಕೆ ನೀಡಿ ಪ್ರಮಾಣ ಪತ್ರ ವಿತರಿಸಿ, ಅದರ ಮಹತ್ವದ ಬಗ್ಗೆ ವಿವರಿಸಿದರು. ಮುಂದಿನ ಯಾವುದೇ ಸಾರ್ವಜನಿಕರ ಪ್ರವಾಸದ ವೇಳೆ ಕೋವಿಡ್ ತಪಾಸಣೆ ಹಾಗೂ ಲಸಿಕೆ ಪಡೆದಿರುವುದು ಈ ಪ್ರಮಾಣ ಪತ್ರದಿಂದ ಮಾತ್ರ ದೃಢಪಡಿಸಲು ಸಾಧ್ಯವಾಗಲಿದೆ ಎಂದರು.
ಹೊನ್ನಾಳಿಯ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಲಸಿಕೆ ಹಾಕಿಸಿಕೊಂಡು ಪ್ರಮಾಣ ಪತ್ರ ಸ್ವೀಕರಿಸಿ ಮಾತನಾಡಿ, ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕಾದ ಅವಶ್ಯಕತೆ ಹೆಚ್ಚಿದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ರಾಜು, ಷಣ್ಮುಖಯ್ಯ, ಮೃತ್ಯುಂಜಯ ಪಾಟೀಲ್ ಲಸಿಕೆ ಪಡೆದರು. ಮಕ್ಕಳ ತಜ್ಞರಾದ ಡಾ. ಹೆಚ್.ಸಿ.ಸುದೀಪ್, ಸ್ಟಾಫ್ ನರ್ಸ್ ಶಾಂತಕುಮಾರಿ ಉಪಸ್ಥಿತರಿದ್ದರು.