ಹರಿಹರ, ಜು.21- ತ್ಯಾಗ, ಬಲಿ ದಾನದ ಸಂಕೇತ ಈದ್-ಉಲ್-ಅಜ್ಹಾ (ಬಕ್ರೀದ್) ಹಬ್ಬ ವನ್ನು ತಾಲ್ಲೂಕಿನಲ್ಲಿ ಬುಧವಾರ ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದಿಂದ ಆಚರಿಸಿದರು.
ಬೆಳಗ್ಗೆ ಮಸೀದಿ ಹಾಗೂ ಮನೆಗಳ ಲ್ಲಿಯೇ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಹುತೇಕರು ಹಬ್ಬದ ಹಿಂದಿನ ದಿನವಾದ ಮಂಗಳವಾರದಂದು ಉಪವಾಸ ಆಚರಿಸಿದರು. ಮಹಿಳೆ ಯರು, ಮಕ್ಕಳಾದಿಯಾಗಿ ಎಲ್ಲರೂ ಬೆಳಗಿನ ಜಾವ ಎದ್ದು ಶುಭ್ರರಾಗಿ ಹೊಸ ಬಟ್ಟೆಗಳನ್ನು ತೊಟ್ಟು ಹಬ್ಬದ ಪ್ರಾರ್ಥನೆ ಮಾಡಿದರು. ನಂತರ ಮನೆಯವರು, ನೆರೆಹೊರೆ, ಸಂಬಂಧಿಕರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು.
ಮಸೀದಿಗಳಲ್ಲಿ ಪ್ರವಚನ ನೀಡಿದ ಧರ್ಮಗುರು ಗಳು, ಅಲ್ಲಾಹನ ಇಚ್ಛೆಯಂತೆ ಪ್ರವಾದಿ ಇಬ್ರಾಹಿ ಮರು ತಮ್ಮ ಇಳಿವಯಸ್ಸಿನಲ್ಲಿ ಪುತ್ರ ಇಸ್ಮಾಯಿಲ್ ರನ್ನು ಬಲಿ ಕೊಡಲು ಸಿದ್ಧರಾದರು. ಆ ಘಟನೆಯ ಪ್ರತೀಕವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗು ತ್ತಿದೆ. ಪ್ರಾಣಿ ಬಲಿ ಕೊಡುವುದು ಇಲ್ಲಿ ಸಾಂಕೇತಿಕ ವಾಗಿದೆ. ಅಗತ್ಯ ಬಿದ್ದಾಗ ನೆರೆ-ಹೊರೆ, ನಾಡು, ದೇಶ, ಧರ್ಮ, ಮಾನವ ಕುಲಕ್ಕಾಗಿ ಧನ, ಸಮಯ, ಶಕ್ತಿ, ಸಾಮರ್ಥ್ಯ, ಸಂಪನ್ಮೂಲಗಳ ತ್ಯಾಗ ಮಾಡಬೇ ಕೆಂಬುದು ಹಬ್ಬದ ತಿರುಳಾಗಿದೆ ಎಂದು ತಿಳಿಸಿದರು.
ನಮ್ಮಲ್ಲಿರುವ ಸಿಟ್ಟು, ದ್ವೇಷಾಸೂಯೆ, ಅಹಂಕಾರ, ದುಶ್ಚಟ, ಭಯ, ಆತಂಕ ಇತರೆ ದುರ್ಗುಣಗಳನ್ನು ನಾವು ತ್ಯಜಿಸಿದರೆ ಅದೂ ಕೂಡ ಬಲಿದಾನ, ತ್ಯಾಗಕ್ಕೆ ಸಮಾನ. ಕೋವಿಡ್ನಿಂದಾಗಿ ಎರಡನೇ ವರ್ಷದ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆಯನ್ನು ಈದ್ಗಾ ಮೈದಾನಗಳ ಬದಲು ಮಸೀದಿ, ಮನೆಗಳಲ್ಲೇ ನಿರ್ವಹಿಸಲಾಗುತ್ತಿದೆ.
ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್, ಎಚ್.ಎಸ್. ಶಿವಶಂಕರ್, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಹಾಗೂ ಸಮಾಜದ ಮುಖಂಡರು ಹಬ್ಬದ ಶುಭಾಶಯ ಕೋರಿದರು. ತಾಲ್ಲೂಕಿನ ಮಲೇಬೆನ್ನೂರು, ಬೆಳ್ಳೂಡಿ, ಭಾನುವಳ್ಳಿ, ಕರ್ಲಹಳ್ಳಿ, ರಾಜನಹಳ್ಳಿ, ಕೊಂಡಜ್ಜಿ ಸೇರಿದಂತೆ ಹಲವು ಗ್ರಾಮಗಳ ಮಸೀದಿಗಳಲ್ಲೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.