ಮಲೇಬೆನ್ನೂರಿನ ಜನತೆಗೆ ಪುರಸಭೆ ಅಧ್ಯಕ್ಷೆ ಶ್ರೀಮತಿ ಮನವಿ
ಮಲೇಬೆನ್ನೂರು, ಮೇ 2 – ಇಲ್ಲಿನ ಪುರಸಭೆ ವತಿಯಿಂದ ಮುದ್ರಿಸಿರುವ ಕೊರೊನಾ ಜಾಗೃತಿ ಕುರಿತಾದ ಭಿತ್ತಿ ಪತ್ರಗಳನ್ನು ಪುರಸಭೆ ಅಧ್ಯಕ್ಷೆ ಶ್ರೀಮತಿ ಪಾನಿಪೂರಿ ರಂಗನಾಥ್ ಬಿಡುಗಡೆಗೊಳಿಸಿ ದರು.
ನಂತರ ಮಾತನಾಡಿದ ಶ್ರೀಮತಿ ಅವರು, ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ಬಗ್ಗೆ ಜಾಗೃತಿ ವಹಿಸುವಂತೆ ಮನವಿ ಮಾಡಿರುವ ಭಿತ್ತಿ ಪತ್ರಗಳನ್ನು ಅಂಟಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಹಾಜರಿದ್ದ ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್‌ಸ್ವಾಮಿ ಮಾತನಾಡಿ, ಕೋವಿಡ್ ಲಸಿಕೆಯನ್ನು ಪಟ್ಟಣದ ಎಲ್ಲಾ ಜನರಿಗೆ ಹಾಕಿಸುವ ಜವಾಬ್ದಾರಿಯನ್ನು ಪುರಸಭೆ ಸದಸ್ಯರು ತೆಗೆದು ಕೊಳ್ಳಬೇಕೆಂದು ಮನವಿ ಮಾಡಿದರು.
ಪುರಸಭೆ ಉಪಾಧ್ಯಕ್ಷೆ ಶ್ರೀಮತಿ ಅಂಜಿನಮ್ಮ ವಿಜಯಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಲಿಂಗಪ್ಪ, ಮುಖ್ಯಾಧಿಕಾರಿ ದಿನಕರ್, ಸದಸ್ಯರಾದ ಬಿ.ಸುರೇಶ್, ಮಹಾಂತೇಶ್‍ಸ್ವಾಮಿ, ಮಾಸಣಗಿ ಶೇಖರಪ್ಪ, ಬಿ.ಹೆಚ್. ಮಂಜಪ್ಪ, ಪಿ.ಆರ್. ರಾಜು, ಎ.ಕೆ. ಲೋಕೇಶ್, ಆಶ್ರಯ ಸಮಿತಿ ಸದಸ್ಯ ಬಿ.ಚಂದ್ರಪ್ಪ, ಪಿಡಬ್ಲ್ಯೂಡಿ ಶಾಲೆಯ ಎಸ್‍ಡಿ ಎಂಸಿ ಅಧ್ಯಕ್ಷ ಬೆಣ್ಣೆಹಳ್ಳಿ ಬಸವರಾಜ್, ಪಾಳೇಗಾರ್ ನಾಗರಾಜ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಪಾನಿಪೂರಿ ರಂಗನಾಥ್, ಬಿ. ಮಂಜುನಾಥ್ ಮತ್ತಿತರರು ಈ ವೇಳೆ ಹಾಜರಿದ್ದರು.