ಜಿಲ್ಲೆಯಲ್ಲಿ 6 ಸಾವು 438 ಪಾಸಿಟಿವ್

ದಾವಣಗೆರೆ, ಮೇ 30- ಜಿಲ್ಲೆಯಲ್ಲಿ ಶುಕ್ರವಾರ 438 ಜನರಲ್ಲಿ ಸೋಂಕು ದೃಢಪಟ್ಟ ಬಗ್ಗೆ ವರದಿಯಾಗಿದ್ದು, 6 ಜನರು ಮೃತಪಟ್ಟಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 1920ಕ್ಕೆ ಹಾಗೂ ಮೃತಪಟ್ಟವರ ಸಂಖ್ಯೆ 277ಕ್ಕೆ ಏರಿಕೆಯಾಗಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 294, ಹರಿಹರ 44, ಜಗಳೂರು 16, ಚನ್ನಗಿರಿ 25, ಹೊನ್ನಾಳಿ 36 ಹಾಗೂ ಹೊರ ಜಿಲ್ಲೆಯ 23 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 150 ಜನರು ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲೋಕಿಕೆರೆ ಗ್ರಾಮದ 45 ವರ್ಷದ ಮಹಿಳೆ, ಯಲ್ಲಮ್ಮ ನಗರದ 55 ವರ್ಷದ ಪುರುಷ,  ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂ.ಸಿ.ಸಿ. ಬಿ ಬ್ಲಾಕ್‌ನ 80 ವರ್ಷದ ಪುರುಷ, ಶಕ್ತಿ ನಗರದ 61 ವರ್ಷದ ಪುರುಷ, ಹೊನ್ನಾಳಿ ತಾಲ್ಲೂಕು ಮರಿಗೊಂಡನಹಳ್ಳಿಯ 70 ವರ್ಷದ ಪುರುಷ ಹಾಗೂ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 58 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.

ಹರಪನಹಳ್ಳಿ : 3 ದಿನಗಳಲ್ಲಿ  116 ಕೋವಿಡ್ ಪ್ರಕರಣ ದೃಢ 

ಹರಪನಹಳ್ಳಿ, ಏ.30- ಹರಪನಹಳ್ಳಿ ತಾಲ್ಲೂಕಿನಲ್ಲಿ  ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಲಿದ್ದು, ಕಳೆದ 3 ದಿನಗಳಲ್ಲಿ  ಒಟ್ಟು 116 ಕೋವಿಡ್ ಪ್ರಕರಣಗಳು ದೃಢ ಪಟ್ಟಿವೆ.

ಪಟ್ಟಣದ ಆಚಾರ್ ಬಡಾವಣೆ, ಪ್ರವಾಸಿ ಮಂದಿರ ವೃತ್ತ, ಶಿಕ್ಷಕರ ಕಾಲೋನಿ, ಕಾಶಿಮಠ ಪ್ರದೇಶಗಳಲ್ಲಿ ಹೆಚ್ಚು ಕಂಡು ಬಂದಿವೆ.

ತಾಲ್ಲೂಕಿನ ಅರಸಿಕೇರಿ, ಕೂಲಹಳ್ಳಿ, ದುಗ್ಗಾವತಿ, ಹಲುವಾಗಲು, ನೀಲಗುಂದ, ಯರಬಾಳು ಮುಂತಾದ ಗ್ರಾಮಗಳಲ್ಲಿ  ಪ್ರಕರಣಗಳು ಹೆಚ್ಚು ಪತ್ತೆಯಾಗಿವೆ ಎಂದು ವೈದ್ಯಾಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.

error: Content is protected !!