ಶಿಕಾರಿಪುರ, ಹೊನ್ನಾಳಿ ಹೋರಾಟದ ಶಕ್ತಿ ಕೇಂದ್ರಗಳು

ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ

ಹೊನ್ನಾಳಿ, ಮಾ.3- ಶಿಕಾರಿಪುರ ಮತ್ತು ಹೊನ್ನಾಳಿ ರಾಜ್ಯದ 2 ಹೋರಾಟದ ಶಕ್ತಿ ಕೇಂದ್ರಗಳು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹುಟ್ಟುಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರೇಣುಕಾಚಾರ್ಯ ಹಲವಾರು ಹೋರಾಟಗಳನ್ನು ನಡೆಸಿ, ಜೈಲುವಾಸ ಅನುಭವಿಸಿದರು.ಹಾಗಾಗಿ ರೇಣುಕಾ ಚಾರ್ಯ ಜನಮಾನಸದಲ್ಲಿ ಉಳಿದು, ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ಹೊನ್ನಾಳಿಗೆ ಕುಡಿಯುವ ನೀರು ಪೂರೈಕೆ ಉದ್ದೇಶಕ್ಕಾಗಿ 60 ಕೋಟಿ ರೂ., ಒಳಚರಂಡಿ ಕಾಮಗಾ ರಿಗೆ 20 ಕೋಟಿ ರೂ. ಸೇರಿ ಒಟ್ಟು 80 ಕೋಟಿ ರೂ.ಗಳ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿ ಸಮ್ಮತಿಸಿದ್ದಾರೆ. ರೇಣುಕಾ ಚಾರ್ಯ ಇನ್ನೂ ಹೆಚ್ಚಿನ ಜನಸೇವೆ ಮಾಡುವಂತಾಗಲಿ ಎಂದು ಹಾರೈಸಿದರು. 

ಜಿ.ಎಂ. ಸಿದ್ಧೇಶ್ವರ್, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಕೃಷಿ ಸಚಿವ ಬಿ.ಸಿ. ಪಾಟೀಲ್, ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ರೇಣುಕಾಚಾರ್ಯರಿಗೆ ಶುಭ ಕೋರಿದರು.

ಸುರಪುರ ಕ್ಷೇತ್ರದ ಶಾಸಕ ರಾಜೂಗೌಡ, ಚಿತ್ರನಟಿ ತಾರಾ, ಜಿ.ಪಂ. ಸದಸ್ಯೆ ದೀಪಾ ಜಗದೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಶಾಂತರಾಜ್ ಪಾಟೀಲ್ ಮತ್ತಿತರರು ಮಾತನಾಡಿದರು. ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್ ಅಧ್ಯಕ್ಷತೆ ವಹಿಸಿದ್ದರು.

ಪ.ಪಂ. ಅಧ್ಯಕ್ಷ ಕೆ.ವಿ. ಶ್ರೀಧರ್, ಉಪಾಧ್ಯಕ್ಷೆ ರಂಜಿತಾ ಚನ್ನಪ್ಪ, ತಾ.ಪಂ. ಅಧ್ಯಕ್ಷೆ ಚಂದ್ರಮ್ಮ ಹಾಲೇಶಪ್ಪ, ಉಪಾಧ್ಯಕ್ಷ ಕೆ.ಎಲ್. ರಂಗನಾಥ್, ಸದಸ್ಯ ಸಿ.ಆರ್. ಶಿವಾನಂದ್, ಕವಿತಾ ಪ್ರಭುಗೌಡ, ಎಪಿಎಂಸಿ ಅಧ್ಯಕ್ಷ ಜಿ.ಎಸ್. ಸುರೇಶ್, ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್, ಯಕ್ಕನಹಳ್ಳಿ ಟಿ.ಎಸ್. ಜಗದೀಶ್, ಬೆಂಗಳೂರು ಜಿ.ಪಂ. ಅಧ್ಯಕ್ಷ ಮರಿಸ್ವಾಮಿ, ಕೆಆರ್‍ಐಡಿಎಲ್ ಅಧ್ಯಕ್ಷ ರುದ್ರೇಶ್, ದೇವರಾಜ್ ಅರಸ್ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಕೌಟಿಲ್ಯ, ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಜೆ.ಬಿ. ಮಾರುತಿನಾಯ್ಕ, ದಾವಣಗೆರೆ ಮೇಯರ್ ಎಸ್.ಟಿ. ವೀರೇಶ್, ಜಿ.ಪಂ. ಅಧ್ಯಕ್ಷೆ ಶಾಂತಕುಮಾರಿ, ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ಸದಸ್ಯರಾದ ಎಂ.ಆರ್. ಮಹೇಶ್, ಉಮಾ ರಮೇಶ್, ಸಿ. ಸುರೇಂದ್ರನಾಯ್ಕ, ಜಿ. ವೀರಶೇಖರಪ್ಪ, ಮುಖಂಡರಾದ ನೆಲಹೊನ್ನೆ ಎನ್.ಎಸ್. ಮಂಜುನಾಥ್, ಕೆ.ಪಿ. ಕುಬೇರಪ್ಪ, ಲಿಂಗಮೂರ್ತಿ, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!