ಜಗಳೂರು, ಮಾ.3- ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಿ ಸಲು ಪ.ಪಂ. ವತಿಯಿಂದ ಹೆಚ್ಚಿನ ಅನುದಾನ ನೀಡಬೇಕು ಮತ್ತು ಎಲ್ಲಾ ಸಂಘಟನೆಗಳು ಕೈ ಜೋಡಿಸಬೇಕು ಎಂದು ಗ್ರಾ.ಪಂ. ಸದಸ್ಯ ಹಾಗೂ ದಲಿತ ಸಂಘಟನೆ ಮುಖಂಡ ಶಂಭುಲಿಂಗಪ್ಪ ಕರೆ ನೀಡಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಪ್ರಗತಿ ಪರ ಸಂಘಟನೆಗಳಿಂದ ನಡೆದ ಪತ್ರಿಕಾಗೋ ಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ದಶಕಗಳ ಹಿಂದಿನ ಹೋರಾಟದ ಫಲ ವಾಗಿ ಪಟ್ಟಣದಲ್ಲಿ ಅಂಬೇಡ್ಕರ್ ವೃತ್ತವಾಗಿ ನಾಮಕರಣವಾಗಿತ್ತು. ನಂತರ ಕೆಲ ಸಂಘ ಟನೆಗಳ ಮಧ್ಯೆ ಭಿನ್ನಾಭಿಪ್ರಾಯಗಳು ಬಂದು, ಪುತ್ಥಳಿ ನಿರ್ಮಿಸಲು ನಿಯಮಾವಳಿ ಗಳ ಪ್ರಕಾರ ವಿಳಂಬವಾಗಿದೆ. ಇದೀಗ ಅವ ಕಾಶ ಒದಗಿ ಬಂದಿದ್ದು ಪ್ರಗತಿಪರ ಹಾಗೂ ಅಂಬೇಡ್ಕರ್ ವಾದಿಗಳು ಒಗ್ಗಟ್ಟಿನಿಂದ ಜವಾಬ್ದಾರಿ ನಿಭಾಯಿಸಬೇಕು ಎಂದರು.
ದೇಶದಲ್ಲಿ ಅಂಬೇಡ್ಕರ್ ಅವರ ಪುತ್ಥಳಿಗಳಿಗೆ ಅವಮಾನಿಸಲಾಗುತ್ತಿದೆ. ಎಲ್ಲಾ ವರ್ಗದವರೂ ಮೀಸಲಾತಿ ಅನುಭವಿ ಸುತ್ತಿದ್ದು, ಬಾಬಾಸಾ ಹೇಬರು ಎಲ್ಲಾ ಜಾತಿಗಳ ಆಸ್ತಿ. ಆದ್ದರಿಂದ ಸ್ವಾರ್ಥ ಸಾಧನೆಗಾಗಿ ಅಂಬೇಡ್ಕರ್ ಸಿದ್ಧಾಂತಗಳಿಗೆ ವಿರೋಧವಾಗಿ ವರ್ತಿಸದೆ, ಗೌರವದಿಂದ ಅವ ರಿಗೆ ಅಪಮಾನವಾಗದಂತೆ ಕಾಯ್ದು ಕೊಳ್ಳ ಬೇಕು ಎಂದು ಸಲಹೆ ನೀಡಿದರು.
ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಸಿ. ತಿಪ್ಪೇಸ್ವಾಮಿ ಮಾತನಾಡಿ, ಅಂಬೇಡ್ಕರ್ ಪುತ್ಥಳಿ ನಿರ್ಮಾಣ ವಿಚಾರವಾಗಿ ಮಾರ್ಚ್ 6 ರಂದು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಪೂರ್ವಭಾವಿ ಸಭೆ ಕರೆದು ಪುತ್ಥಳಿ ಸಂರಕ್ಷಣಾ ಸಮಿತಿ ರಚಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಭಿಪ್ರಾಯ ಹಂಚಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರಾದ ಹಟ್ಟಿ ತಿಪ್ಪೇಸ್ವಾಮಿ, ಸತ್ಯಮೂರ್ತಿ, ಓಬಣ್ಣ, ಹನುಮಂತಾಪುರ ತಿಪ್ಪೇಸ್ವಾಮಿ, ಸತೀಶ್ , ಮಂಜಪ್ಪ, ರವಿ, ಪರಶುರಾಮ್, ಉಮೇಶ್, ಹನುಮಂತಪ್ಪ, ಜೀವನ್, ಹೇಮಾರೆಡ್ಡಿ, ಅಂಜಿನಪ್ಪ, ಮಾದಿಹಳ್ಳಿ ಕೆ. ಮಂಜಪ್ಪ ಇನ್ನಿತರರು ಉಪಸ್ಥಿತರಿದ್ದರು.