ಕೂಡ್ಲಿಗಿ, ಜು.20- ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಐಡಿ ಕಾರ್ಡ್ ವಿತರಿಸಲಾಯಿತು.
ಕೂಡ್ಲಿಗಿ ರಾಜ್ಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ್, ಜಿಲ್ಲಾ ಕಾರ್ಯದರ್ಶಿ ಗಜಾಪುರ ಭೀಮಣ್ಣ, ತಾಲ್ಲೂಕು ಅಧ್ಯಕ್ಷ ಕೆ. ನಾಗರಾಜ, ಕಾವಲಿ ಶಿವಪ್ಪನಾಯಕ, ಬಿ. ನಾಗರಾಜ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಸದಸ್ಯರನ್ನಾಗಿ ಎಂ. ಮಂಜುನಾಥ (ಮಯೂರ ) ಮತ್ತು ಸುನಿಲ್ ಗೌಡ್ರು ಇವರನ್ನು ಸಂಘದ ಐಡಿ ಕಾರ್ಡ್ ನೀಡಿ ಸಂಘಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು.
ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ್ ಸಂಘದ ಸಿದ್ಧಾಂತಗಳನ್ನು ತಿಳಿಯಪಡಿಸಿ, ಸಂಘಕ್ಕೆ ಯಾವುದೇ ಕಳಂಕ ಬರುವ ಹಾಗೆ ನಡೆದು ಕೊಂಡರೆ ಅಂತಹವರನ್ನು ತಕ್ಷಣದಿಂದ ಉಚ್ಛಾಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.