ಎಸ್ಪಿ ರವಿ ಡಿ. ಚನ್ನಣ್ಣನವರ್
ಕೂಡ್ಲಿಗಿ, ಮಾ.3- ಇಂದು ಜಗತ್ತು ಜ್ಞಾನದಿಂದ ಆಳಲ್ಪಡುತ್ತಿದೆಯೇ ಹೊರತು, ಖಡ್ಗದಿಂದ ಅಲ್ಲ. ಹಿಂದೆ ರಾಜರು ತಮ್ಮ ತೋಳ್ಬಲ, ಖಡ್ಗದಿಂದ ಜಗತ್ತನ್ನು ಗೆದ್ದು ಸೋತ ರಾಜರನ್ನು ಸಾಮಂತರನ್ನಾಗಿ ಮಾಡಿಕೊಂಡು ಕಪ್ಪ ಕಾಣಿಕೆ ಪಡೆಯುತ್ತಿದ್ದರು. ಆದರೆ, ಇಂದು ಶಿಕ್ಷಣ ಮಾತ್ರ ಎಲ್ಲ ಸಮಸ್ಯೆಗೆ ಪರಿಹಾರ ವಾಗಿದೆ ಹಾಗೂ ಬಿಡುಗಡೆಯಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ಆರಕ್ಷಕ ರವಿ ಡಿ.ಚನ್ನಣ್ಣನವರ್ ವಿದ್ಯಾರ್ಥಿಗಳಿಗೆ ಹೇಳಿದರು.
ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ಜಂಗಮ ಸೋವೇನಹಳ್ಳಿಯ ನಂದಿ ಪ್ರಕಾಶನ ಆಯೋಜಿಸಿದ್ದ ಲೇಖಕ ಹಿ.ಮ. ಬಸವರಾಜ ಅವರ `ಉರಿಲಿಂಗ ಪೆದ್ದಿ’ ಕೃತಿ ಬಿಡುಗಡೆ ಮಾಡಿದ ನಂತರ ಅವರು ಮಾತನಾಡಿದರು.
ವಿದ್ಯಾರ್ಥಿಗಳು 25 ವರ್ಷ ಯೋಜನೆ ಹಾಕಿಕೊಂಡು ಗುಣಮಟ್ಟದ ಶಿಕ್ಷಣ ಪಡೆದರೆ ಮುಂದಿನ 75 ವರ್ಷಗಳ ಕಾಲ ಉತ್ತಮ ಜೀವನ ನಡೆಸಬಹುದು. ಛಲದಿಂದ ಸಾಧನೆ ಮಾಡಬೇಕು. ಆಗ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಸುಂದರವಾಗಿರಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕೃತಿ ಕುರಿತು ಹಂಪಿ ವಿಶ್ವವಿದ್ಯಾಲಯದ ಡಾ. ನಂದೀಶ್ವರ ದಂಡೆ ಮಾತನಾಡಿದರು. ಕೂಡ್ಲಿಗಿ ಹಿರೇಮಠ ಶ್ರೀ ಪ್ರಶಾಂತ ಸಾಗರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಂಡೂರಿನ ಶ್ರೀ ಪ್ರಭು ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ನಂದಿ ಪ್ರಕಾಶನದ ನಂದಿ ಬಸವರಾಜ, ನಟ ಬಂಗಾರು ಹನುಮಂತು, ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ಎಸ್. ದುರುಗೇಶ್, ವಾಲ್ಕೀಕಿ ಮಹಾಸಭಾದ ಅಧ್ಯಕ್ಷ ಸುರೇಶ್ ವಿಕ್ಟರಿ, ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಟಿ.ಜಿ.ನಾಗರಾಜಗೌಡ, ಪಂಚಮಸಾಲಿ ಸಮಾಜದ ಅಧ್ಯಕ್ಷ ಹೆಚ್. ರೇವಣ್ಣ, ಗುಂಡು ಮುಣಗು ಪ್ರಕಾಶ್, ತಾ.ಪಂ. ಸದಸ್ಯ ಹುಡೇಂ ಪಾಪನಾಯಕ, ಪತ್ರಕರ್ತರ ಸಂಘದ ಅಧ್ಯಕ್ಷ
ಕೆ. ನಾಗರಾಜ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಎಂ. ರವಿಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ. ಶಿವರಾಜ, ತಳವಾರ ಶರಣಪ್ಪ, ವಿ. ಗೀತಾ, ಎ.ಎಂ. ವೀರಯ್ಯ, ಗೌಡ್ರ ಕೊಟ್ರೇಶ್, ಕೆ.ಎಸ್. ವೀರೇಶ್ ಇನ್ನಿತರರಿದ್ದರು.