ಹರಿಹರ, ಮಾ.1- ಹೊಸಪೇಟೆಯಲ್ಲಿ ವಕೀಲ ರೊಬ್ಬರನ್ನು ಮತ್ತು ತೆಲಂಗಾಣದಲ್ಲಿ ವಕೀಲ ದಂಪ ತಿಯನ್ನು ಹತ್ಯೆಗೈದಿರುವ ಹಿನ್ನೆಲೆಯಲ್ಲಿ ಸೋಮ ವಾರ ಇಲ್ಲಿನ ಕೋರ್ಟ್ ಕಾಂಪ್ಲೆಕ್ಸ್ನ ಸಂಘದ ಕಛೇರಿಯಲ್ಲಿ ಸಭೆ ಸೇರಿದ್ದ ವಕೀಲರು, ಕೂಡಲೇ ಕೇಂದ್ರ, ರಾಜ್ಯ ಸರ್ಕಾರಗಳು ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ವಕೀಲರಾದ ಬಿ. ಹಾಲಪ್ಪ ಮಾತನಾಡಿ, ವಕೀಲರುಗಳ ರಕ್ಷಣೆಗೋಸ್ಕರ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಕೂಡಲೇ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಶ್ರೀನಿವಾಸ್ ಕಲಾಲ್ ಮಾತನಾಡಿ, ವಕೀಲರ ಮೇಲಿನ ದೌರ್ಜನ್ಯ ದಿಗ್ಬ್ರಮೆ ಮೂಡಿಸುವಂತಿದೆ. ನ್ಯಾಯಾಲಯಗಳ ಆವರಣಗಳಲ್ಲಿ ಸಿ.ಸಿ. ಟಿವಿಯನ್ನು ಕಡ್ಡಾಯವಾಗಿ ಅಳವಡಿಕೆ ಮಾಡಬೇಕು. ಪ್ರಕರಣದ ಕಕ್ಷಿದಾರರನ್ನು ದ್ವಾರದಲ್ಲಿಯೇ ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕು. ನ್ಯಾಯವಾದಿಗಳು ಸಹ ಕಕ್ಷಿದಾರರೊಂದಿಗೆ ವೃತ್ತಿ ಪರತೆಯಿಂದ ನಡೆದುಕೊಳ್ಳಬೇಕು ಎಂದರು.
ಕಿತ್ತೂರ್ ಶೇಖ್ ಇಬ್ರಾಹಿಂ, ಹೆಚ್.ಎಂ.ಷಡಾಕ್ಷರಯ್ಯ, ಕೆ. ರಾಜು, ಸಿದ್ದು ಮೆಹರ್ವಾಡೆ, ಎನ್.ಪಿ. ತಿಮ್ಮನಗೌಡ, ಸಂಘದ ಅಧ್ಯಕ್ಷ ನಾಗರಾಜ ಹಲವಾಗಲು, ಸಂಘದ ಕಾರ್ಯದರ್ಶಿ ಹೆಚ್.ಹೆಚ್. ಲಿಂಗರಾಜ್ ಮಾತನಾಡಿ, ವಕೀಲರುಗಳ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕಾಯ್ದೆಗಳ ಜಾರಿ ಹಾಗೂ ಅವುಗಳ ಅಳವಡಿಕೆ ಅತೀ ಅವಶ್ಯಕವಾಗಿರುತ್ತದೆ. ಅಲ್ಲದೆ ಹತ್ಯೆಗೀಡಾದ ಕುಟುಂಬ ವರ್ಗಕ್ಕೆ ರಾಜ್ಯ ಸರ್ಕಾರ ಪರಿಹಾರವನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಆರಂಭದಲ್ಲಿ ಮೌನಾಚರಣೆ ನಡೆಸಿ, ಮೃತ ವಕೀಲರಿಗೆ ಸಂತಾಪ ಸೂಚಿಸಲಾಯಿತು. ವಕೀಲರಾದ ಕೆ. ಹನುಮಂತಪ್ಪ, ಬಿ. ನಾಗರಾಜು, ಎಸ್. ಪ್ರಸನ್ನಕುಮಾರ್, ಕೆ.ಸಿ. ಬಸವರಾಜ, ಸೈಯದ್ ಯೂನುಸ್ ಬಿ, ಮೋಹನ್ ಲಾಲ್ ಸಾ ಖಿರೋಜಿ, ಎಂ.ಜಿ. ಪ್ರಸಾದ್, ಗಣೇಶಪ್ಪ ಕೆ. ದುರ್ಗದ್, ಪಿ. ರುದ್ರಗೌಡ, ವೈ. ಸುರೇಶಕುಮಾರ್, ಸಿ.ಬಿ. ರಾಘವೇಂದ್ರ, ಮಾಲತೇಶ, ಜಮುನಾ, ಸುಧಾ ಸಾಲಕಟ್ಟೆ, ಕೆಂಚಪ್ಪ ನಿಟುವಳ್ಳಿ, ಜಿ.ಬಿ. ರಮೇಶ್ , ಪರಶುರಾಮ ಅಂಬೇಕರ್, ಎಂ.ಬಿ. ನಾಗರಾಜ, ಮಂಜುನಾಥ. ಬಿ.ಎಸ್. ಗಣೇಶ್, ಬಿ.ಎಂ. ಮಂಜುನಾಥ, ರಿಯಾಜ್ ಇನ್ನಿತರರಿದ್ದರು.