ದಾವಣಗೆರೆ, ಏ. 27 – ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಎಂ.ಸಿ.ಸಿ. `ಬಿ’ ಬ್ಲಾಕ್ನ ಸ್ನೇಹ ಮಹಿಳಾ ಬಳಗದ ವತಿಯಿಂದ ಕೆ.ಆರ್. ಮಾರುಕಟ್ಟೆಯಲ್ಲಿ 150ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳಿಗೆ ಉಚಿತವಾಗಿ ಮಾಸ್ಕ್ ವಿತರಿಸುವ ಮೂಲಕ ಸಾರ್ವಜನಿಕರಲ್ಲಿ ಹಾಗೂ ವ್ಯಾಪಾರಿಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹಗಲಿರುಳೆನ್ನದೆ ಕೋವಿಡ್ನಿಂದ ಸಾರ್ವಜನಿಕರನ್ನು ಪಾರು ಮಾಡಲು ಶ್ರಮ ಪಡುತ್ತಿರುವ ಸಂದರ್ಭದಲ್ಲಿ ತಾವುಗಳು ಸಹ ಜಾಗೃತಿ ಮೂಡಿಸಿ ಅವರ ಕಾರ್ಯಕ್ಕೆ ಜೊತೆಗೂಡಬೇಕು ಎಂದು ಮನವಿ ಮಾಡಿದರು.
ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾ ಡುವುದು ಹಾಗೂ ಅನವಶ್ಯಕವಾಗಿ ಓಡಾಡದೇ ಇರು ವುದು ಒಳಿತು ಎಂದು ಸಾರ್ವಜನಿಕರಿಗೆ ತಿಳಿಹೇಳಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ಸ್ನೇಹ ಮಹಿಳಾ ಬಳಗದ ಶ್ರೀಮತಿ ಮಂಜುಳಾ ಬಸಲಿಂಗಪ್ಪ, ಶ್ರೀಮತಿ ಶೋಭಾ ರವಿ, ಶ್ರೀಮತಿ ತುಳಸಿ ಡಾ. ಮಹೇಶ್ವರಪ್ಪ, ಶ್ರೀಮತಿ ಗಾಯತ್ರಿ ಬಳಿಗಾ ಮತ್ತಿತರರು ಪಾಲ್ಗೊಂಡಿದ್ದರು.