ಒಳ್ಳೆಯ ಕೆಲಸ ಮಾಡಿದವರಿಗೆ ಪ್ರತಿಫಲ ಖಚಿತ

ದಾವಣಗೆರೆ, ಮಾ.1- ಸಮಾಜಕ್ಕೆ ಒಳ್ಳೆಯ ಕೆಲಸ ಮಾಡುವವರಿಗೆ ಪ್ರತಿಫಲ ಸಿಕ್ಕುವುದು ಖಚಿತ ಎಂದು ಚನ್ನಗಿರಿಯ ಶ್ರೀ ಬಸವ ಜಯಚಂದ್ರ ಸ್ವಾಮೀಜಿ ಪ್ರತಿಪಾದಿಸಿದರು.

ಶ್ರೀಗಳು ನಗರದ ರೋಟರಿ ಬಾಲಭವನದಲ್ಲಿ ವಿಶ್ವ ವೀರಶೈವ ಲಿಂಗಾಯತ ಏಕೀಕರಣ ಪರಿಷತ್ ಹಾಗೂ ವಿಶ್ವ ಕಲ್ಯಾಣ ಪರಿಸರ ಗ್ರಾಹಕ ಸಾಂಸ್ಕೃತಿಕ ಪರಿಷತ್ ಸಹಯೋಗದಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ, ಕೃಷಿ ಕಾಯ್ದೆ, ಪರಿಸರ ರಕ್ಷಣೆ, ಕೊರೊನಾ ಜೀವನ ದರ್ಶನ, ಕೃತಿ ವಿಮರ್ಶೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.

ನಿಜವಾದ ಸಾಧಕರು ಸಾಯುವ ತನಕ ಸಾಧನೆ ಮಾಡುತ್ತಾರೆ. ಸ್ವಾಮಿ ವಿವೇಕಾನಂದರು ತಮ್ಮ ಜೀವಿತದ ಕೊನೆಯವರೆಗೂ ಸಾಧನೆ ಮಾಡಿದರು. ಆದ್ದರಿಂದ ಅವರನ್ನು ಇನ್ನೂ ನೆನಪು ಮಾಡಿಕೊಳ್ಳು ತ್ತೇವೆ. ಅವರ ತತ್ಪಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿಗಳೂ, ವಿಶ್ವ ವೀರಶೈವ – ಲಿಂಗಾಯತ ಏಕೀಕರಣ ಪರಿಷತ್ ಅಧ್ಯಕ್ಷರೂ ಆದ ವಕೀಲ ಬಳ್ಳಾರಿ ರೇವಣ್ಣ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ರೈತರಿಗೆ ಪೂರಕವಾಗಿದೆಯೇ ಹೊರತು, ಮಾರಕವಾಗಿಲ್ಲ. ರೈತರಿಗೆ ಅನುಕೂಲವಾಗುವ ಅನೇಕ ಅಂಶಗಳು ಕೃಷಿ ಕಾಯ್ದೆಯಲ್ಲಿವೆ. ಇದನ್ನು ತಿಳಿಯದೇ ಕೆಲವು ರಾಜಕಾರಣಿಗಳು ರಾಜಕೀಯ ಮಾಡಿ, ರೈತರನ್ನು ಪ್ರಚೋದಿಸುತ್ತಿದ್ದಾರೆಂದು ದೂರಿದರು.

ಕೃಷಿ ತಜ್ಞ ಕೃಷ್ಣಪ್ಪಗೌಡ, ಪರಿಸರ ರಕ್ಷಕ ಡಾ. ಹೆಚ್.ಕೆ.ಸ್ವಾಮಿ, ಸಾಹಿತಿಗಳಾದ ರಮೇಶ್ ಶೆಟ್ಟಿ, ಟಿ.ಪಿ.ಜ್ಞಾನಮೂರ್ತಿ, ಎಂ.ಮಹೇ ಶ್ವರಪ್ಪ, ಶಿವು ಆಲೂರು, ಜೆಡಿಎಸ್ ಮುಖಂಡ ಕೆ.ಎ.ಪಾಪಣ್ಣ ಮತ್ತಿತರರು ಆಗಮಿಸಿದ್ದರು.

ರುಕ್ಕುಬಾಯಿ ಸಂಗಡಿಗರು ಪಾರ್ಥಿಸಿದರು. ರಹ್ಮತುನ್ನೀಸ ಅವರು ಸ್ವಾಗತಿಸಿದರು. ಕಾರ್ಯಕ್ರ ಮವನ್ನು ಎನ್.ಜೆ.ಶಿವಕುಮಾರ್ ನಿರೂಪಿಸಿದರು.

error: Content is protected !!