ಹರಪನಹಳ್ಳಿ, ಜು.19- ನಿನ್ನೆ ಸುರಿದ ಭಾರೀ ಮಳೆಗೆ ಹಾನಿಗೊಳಗಾದ ಗ್ರಾಮಗಳಿಗೆ ತಹಶೀಲ್ದಾರ್ ಎಲ್.ಎಂ. ನಂದೀಶ್ ಭೇಟಿ ನೀಡಿ ಪರಿಶೀಲಿಸಿದರು.
ತಾಲ್ಲೂಕಿನ ಪೋತಲಕಟ್ಟೆ, ಗೌಳೇರಹಟ್ಟಿ, ರಾಮಘಟ್ಟದಲ್ಲಿ ಮಳೆಗೆ ಬಿದ್ದ ಮನೆಗಳನ್ನು ಪರಿಶೀಲಿಸಿ ಶೀಘ್ರವೇ ಪರಿಹಾರ ಒದಗಿಸಲಾಗುವುದು ಎಂದು ಸಂತ್ರಸ್ತರಿಗೆ ಭರವಸೆ ನೀಡಿದರು. ಈ ವೇಳೆ ಫಣಿಯಾಪುರ ಗ್ರಾಮದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಮೇಕೆಗಳನ್ನು ಪರಿಶೀಲಿಸಿದ ನಂತರ ಕುರೆಮಾಗಾನಹಳ್ಳಿ, ಚಟ್ನಿಹಳ್ಳಿ ಗ್ರಾಮಕ್ಕೆ ತೆರಳಿ ಕೋಡಿ ಬಿದ್ದ ಕೆರೆಗಳನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಫಾತೀಮಾ, ಪಿಎಸ್‌ಐ ಕಿರಣಕುಮಾರ್, ತಾ.ಪಂ. ಸದಸ್ಯ ಕೆಂಚನಗೌಡ್ರು, ಚಟ್ನಹಳ್ಳಿ ಗ್ರಾ.ಪಂ. ಅಧ್ಯಕ್ಷ ಅಜ್ಜಯ್ಯ, ಮುಖಂಡರಾದ ಫಣಿಯಾಪುರ ಲಿಂಗರಾಜ್, ಕರಡಿದುರ್ಗದ ಚೌಡಪ್ಪ, ಚಟ್ನಿಹಳ್ಳಿ ಬಸವರಾಜ, ಕುರೆಮಾಗಾನಹಳ್ಳಿ ಪ್ರಕಾಶ, ಬಸವರಾಜ್, ಪಿಡಿಓ ಉಮೇಶ್, ರಾಜಸ್ವ ನಿರೀಕ್ಷಕ ಶ್ರೀಧರ್, ಗ್ರಾಮ ಲೆಕ್ಕಾಧಿಕಾರಿ ವಿಶ್ವನಾಥ, ಮಂಜುನಾಥ್ ಹಾಗು ಇನ್ನಿತರರು ಉಪಸ್ಥಿತರಿದ್ದರು.