ರಾಣೇಬೆನ್ನೂರಿನಲ್ಲಿ ಪರೀಕ್ಷೆ ನಿರಾತಂಕ

ರಾಣೇಬೆನ್ನೂರು, ಜು.19- ಕೊರೊನಾ ಸೋಂಕಿನ ಭಯದ ನಡುವೆಯೂ ಸೋಮವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮೊದಲ ದಿನವಾದ ಇಂದು ಗಣಿತ, ವಿಜ್ಞಾನ ಮತ್ತು ಸಮಾಜ ಪರೀಕ್ಷೆಗಳು ನಿರಾತಂಕವಾಗಿ ಜರುಗಿದವು.

ನಗರದಲ್ಲಿ ಬಹುತೇಕ ಪಾಲಕರು ಮಕ್ಕಳನ್ನು ಸ್ವಂತ ವಾಹನ, ಆಟೋರಿಕ್ಷಾ ಮೂಲಕ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಬಿಟ್ಟರು. ತಹಸೀಲ್ದಾರ್ ಜಿ.ಎಸ್. ಶಂಕರ್‌ ಹಾಗೂ ಬಿಇಒ ಗುರುಪ್ರಸಾದ್‌ ಜಂಟಿಯಾಗಿ ವಿವಿಧ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರಿಶೀಲಿಸಿದರು. 

ತಾಲ್ಲೂಕಿನಲ್ಲಿ ಒಟ್ಟು 4575 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಅದರಲ್ಲಿ ಸೋಮವಾರ ನಡೆದ ಪರೀಕ್ಷೆಗೆ 29 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

error: Content is protected !!