ಬಿಜೆಪಿ ಆಡಳಿತದಿಂದಾಗಿ ಕೊರೊನಾದಲ್ಲೂ ನೆಮ್ಮದಿ ಜೀವನ ಮಾಡುವಂತಾಗಿದೆ

ಹರಿಹರದ ಕಾರ್ಯಕ್ರಮದಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ಹಳಸಬಾಳು ಶಿವಾನಂದಪ್ಪ ಅಭಿಮತ

ಹರಿಹರ, ಜು.18- ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಆಡಳಿತ ಮಾಡುತ್ತಿರುವ  ಬಿಜೆಪಿ ಬಡವರಿಗೆ, ರೈತರಿಗೆ ಮತ್ತು ಶೋಷಿತ ವರ್ಗದವರ ಬೆಳವಣಿಗೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದು, ಅಭಿವೃದ್ಧಿ ಕೆಲಸಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡುವ ಮೂಲಕ, ಪಕ್ಷವನ್ನು ಇನ್ನಷ್ಟು ಸದೃಢ ಗೊಳಿಸುವಂತೆ ಬಿಜೆಪಿ ಮಾಜಿ ಅಧ್ಯಕ್ಷ ಹಳಸಬಾಳು ಶಿವಾನಂದಪ್ಪ ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.  

ನಗರದ ಕಾಟ್ವೆ ಭವನದಲ್ಲಿ ನಿನ್ನೆ ನಡೆದ ಬಿಜೆಪಿ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು. 

ಬಿಜೆಪಿಯ ಕೇಂದ್ರ ಮತ್ತು ರಾಜ್ಯದ ಆಡಳಿತವು   ಕೊರೊನಾ ಮಹಾಮಾರಿ ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆ ತಡೆಯಲು ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡಿದ್ದರ ಪರಿಣಾಮವಾಗಿ ಇಂದು ದೇಶದ ಜನರು ನೆಮ್ಮದಿ ಜೀವನ ನಡೆಸಲು ದಾರಿಯಾಯಿತು. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ಸುಧಾರಣೆ ತರಲಿಕ್ಕಾಗದೆ ದೊಡ್ಡ ಪ್ರಮಾಣದಲ್ಲಿ ಸಾವುಗಳು ಸಂಭವಿಸುವಿಸುತ್ತಿದ್ದವು ಅನಿಸುತ್ತದೆ ಎಂದರು. 

ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಕೇವಲ ಒಂದು ವರ್ಗದವರ ಅಭಿವೃದ್ಧಿಗೆ ಪೂರಕವಾಗಿ ಯೋಜನೆಗಳನ್ನು ರೂಪಿಸದೆ, ದೇಶದ ಎಲ್ಲಾ ವರ್ಗದವರು ಚನ್ನಾಗಿ, ಸುಭಿಕ್ಷವಾಗಿ, ಆರೋಗ್ಯ ವಂತರಾಗಿ ತಮ್ಮ ಬದುಕು ಕಂಡುಕೊಳ್ಳಲು ವಿಭಿನ್ನ ರೀತಿಯಲ್ಲಿ ಸಹಾಯ ಮತ್ತು ಸಹಕಾರ ಮಾಡುತ್ತಾ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ‌ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರ ಘಟಕದ
ಅಧ್ಯಕ್ಷ ಅಜಿತ್ ಸಾವಂತ್, ನಗರಸಭೆ ಸದಸ್ಯ ರಜನಿಕಾಂತ್, ದೂಡಾ ಸದಸ್ಯ ರಾಜು
ರೋಖಡೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾತಿ ಚಂದ್ರಶೇಖರ್, ಚಂದ್ರಶೇಖರ್, ತುಳಜಪ್ಪ ಭೂತೆ, ರೂಪಾ ಕಾಟ್ವೆ, ಮಾರುತಿ ಶೆಟ್ಟಿ, ರಾಘವೇಂದ್ರ  ಮತ್ತಿತರರು ಹಾಜರಿದ್ದರು.  

error: Content is protected !!