ದಾವಣಗೆರೆ, ಏ.25- ಜಿಲ್ಲೆಯಲ್ಲಿ ಭಾನುವಾರ 242 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಓರ್ವ ಮಹಿಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 127, ಹರಿಹರ 24, ಜಗಳೂರು 16, ಚನ್ನಗಿರಿ 24, ಹೊನ್ನಾಳಿ 9 ಹಾಗೂ ಹೊರ ಜಿಲ್ಲೆಯ 12 ಜನ ರಲ್ಲಿ ಸೋಂಕು ಪತ್ತೆಯಾಗಿದೆ. 96 ಜನರು ಸೋಂಕು ಗುಣಪಡಿಸಿ ಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಕ್ರಿಯ ಸೋಂಕಿತರ ಸಂಖ್ಯೆ 1542ಕ್ಕೆ ಏರಿಕೆಯಾಗಿದೆ. ಸಿ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚನ್ನಗಿರಿ ಟೌನ್ ದುರ್ಗಾಂಬಿಕಾ ರಸ್ತೆಯ 51 ವರ್ಷದ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ.