ದಾವಣಗೆರೆ, ಜು.15- ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರ ಕುಟುಂಬದಿಂದ ನೀಡುತ್ತಿ ರುವ ಉಚಿತ ಕೋವಿಡ್ – 19 ಲಸಿಕೆ ಅಭಿಯಾನವು 43ನೇ ವಾರ್ಡಿನ ಶಾಮನೂರಿನ ಜನತಾ ಕಾಲೋನಿಯಲ್ಲಿ ನಡೆಯಿತು. ಎಸ್.ಎಸ್. ಮಲ್ಲಿಕಾರ್ಜುನ್ ಯವಶಕ್ತಿ ಬಳಗದ ಸಂಸ್ಥಾಪಕ ಅಧ್ಯಕ್ಷರೂ ಆದ ಕರ್ನಾಟಕ ದಲಿತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಕಣ್ಣಾಳ ಅಂಜಿನಪ್ಪ ಅವರೂ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಲಸಿಕೆ ಪಡೆದರು. ದೂಡಾ ಮಾಜಿ ಅಧ್ಯಕ್ಷ ಜಿ.ಹೆಚ್. ರಾಮಚಂದ್ರಪ್ಪ, ನಗರ ಪಾಲಿಕೆ ಸದಸ್ಯ ಕಲ್ಲಳ್ಳಿ ನಾಗರಾಜ್, ಕಾಂಗ್ರೆಸ್ ಮುಖಂಡ ಎಂ. ಡಿ. ಮಾರುತಿ ಮತ್ತಿತರರು ಈ ಸಂದರ್ಭದಲ್ಲಿದ್ದರು.
January 24, 2025