ಹರಪನಹಳ್ಳಿ ತಾ.ನ ಸಮಗ್ರ ಅಭಿವೃದ್ಧಿಗೆ ಸದಾ ಸಿದ್ಧ : ಶಾಸಕ ಕರುಣಾಕರರೆಡ್ಡಿ

ಹರಪನಹಳ್ಳಿ, ಫೆ.24- ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಸಿದ್ದನಿದ್ದು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಜಿ.ಕರುಣಾಕರೆಡ್ಡಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಸುಮಾರು 2 ಕೋಟಿ 32 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊ ಳ್ಳಲಿರುವ 15 ಕೊಠಡಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.

ಈ ಕಾಲೇಜಿಗೆ 15 ಕೊಠಡಿಗಳು ಮುಂಜೂರಾ ಗಿದ್ದು, ಉತ್ತಮ ಗುಣಮಟ್ಟದ ಕಾಮಗಾರಿ ಪೂರ್ಣ ಗೊಳಿಸಲು ಸಂಬಂಧ ಪಟ್ಟ ಗುತ್ತಿಗೆದಾರರಿಗೆ ಸ್ಥಳದ ಲ್ಲಿಯೇ ಸೂಚಿಸಿ, ಬಳಿಕ 1.30 ಲಕ್ಷ ರೂ. ಮೊತ್ತದಲ್ಲಿ ನಿರ್ಮಾಣಗೊಳ್ಳಲಿರುವ ತಾಲ್ಲೂಕು ವೈದ್ಯಾಧಿಕಾರಗಳ ಆಡಳಿತ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದರು‌.

ಪಟ್ಟಣದಲ್ಲಿನ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ತಾಲ್ಲೂಕಿನ ಕಂಭಟ್ರಹಳ್ಳಿ, ತಲವಾಗಲು, ಗುಂಡಗತ್ತಿ, ಚಿರಸ್ತಹಳ್ಳಿ, ಶಿವಪುರ, ನಿಟ್ಟೂರು, ನಿಟ್ಟೂರು ಬಸಾಪುರ, ತಾವರಗುಂದಿ, ಗರ್ಭಗುಡಿ, ಕಣವಿ, ಅರಸನಾಳು, ಚಿಕ್ಕ ಮಜ್ಜಿಗೇರೆ, ನೀಲಗುಂದ ಗ್ರಾಮಗಳಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಾಲಾ ಕೊಠಡಿಗಳು, ಅಂಗನವಾಡಿ ಕೇಂದ್ರಗಳು ಸೇರಿದಂತೆ ಸಮುದಾಯ ಭವನಗಳನ್ನು ಉದ್ಘಾಟಿಸಿದರು.

ಈ ವೇಳೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್, ಹಿರಿಯ ಮುಖಂಡರಾದ ಎಂ.ಪಿ.ನಾಯ್ಕ, ಬಾಗಳಿ ಕೊಟ್ರೇಶಪ್ಪ, ಬೆಣ್ಣಿಹಳ್ಳಿ ಕರೇಗೌಡ, ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯದರ್ಶಿ ಆರ್.ಲೋಕೇಶ್, ತೆಲಿಗೆ ಹೋಬಳಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿರಗಾನಹಳ್ಳಿ ಬಿ.ವಿಶ್ವನಾಥ್ ಎಸ್.ಪಿ.ಲಿಂಬ್ಯಾನಾಯ್ಕ, ವಿನಾಯಕ ಭಜಂತ್ರಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!