ಮಲೇಬೆನ್ನೂರು, ಏ.23- ಗುರುವಾರ ರಾತ್ರಿ ಸುರಿದ ಬಿರುಗಾಳಿ, ಸಿಡಿಲು-ಗುಡುಗು ಸಹಿತ ಮಳೆಯಿಂದಾಗಿ ಸಂಕ್ಲೀಪುರ ಗ್ರಾಮದ ಸುಮಾರು 50 ಎಕರೆ ಭತ್ತದ ಬೆಳೆ ನೆಲಕಚ್ಚಿದೆ. ಜಿಗಳಿ ಗ್ರಾಮದಲ್ಲಿ ಧರ್ಮಪ್ಪ ತಂದೆ ರಂಗಪ್ಪ ಅವರಿಗೆ ಸೇರಿದ ಮನೆ ಭಾಗಶಃ ಹಾನಿಯಾಗಿದ್ದು, ಹೊಸಹಳ್ಳಿ ಗ್ರಾಮದಲ್ಲೂ ಸುಭಾಷ್ ರೆಡ್ಡಿ ಅವರ ಮನೆ ಗೋಡೆ ಕುಸಿದು ಬಿದ್ದಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸ್ಥಳ ಪರಿಶೀಲಿಸಿ ಹಾನಿ ವಿವರ ನೀಡುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದ್ದೇನೆಂದು ಉಪತಹಶೀಲ್ದಾರ್ ಆರ್.ರವಿ ತಿಳಿಸಿದ್ದಾರೆ.
April 10, 2025