ರೈತರ ಸಮಸ್ಯೆಗಳನ್ನು ಪರಿಹರಿಸಲು ಅ. 26 ರ ಬೆಳಿಗ್ಗೆ ಗುರುಭವನದಲ್ಲಿ ಮಹತ್ವದ ಸಭೆ ಏರ್ಪಡಿಸಿದೆ.
– ಕೆ.ಬಿ. ರಾಮಚಂದ್ರಪ್ಪ , ತಹಶೀಲ್ದಾರ್
ಸರ್ಕಾರಿ ಸೇವೆಗಳು ಸಾರ್ವಜನಿಕರಿಗೆ ಉಚಿತವಾಗಿ ದೊರೆಯಬೇಕಿದೆ. ಆದರೆ, ತಾಲ್ಲೂಕಿನಲ್ಲಿ ಭ್ರಷ್ಟಾಚಾರ ಮಿತಿ ಮೀರಿ ಆಡಳಿತ ಕಣ್ಮುಚ್ಚಿ ಕುಳಿತುಕೊಂಡಿದೆ.
– ತೇಜಸ್ವಿ ಪಟೇಲ್, ರೈತ ಮುಖಂಡ
ಹರಿಹರ, ಅ.11- ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಮತ್ತು ಮೆಕ್ಕೆಜೋಳ, ಭತ್ತದ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಒತ್ತಾಯಿಸಿ ಇಂದಿಲ್ಲಿ ಪ್ರತಿಭಟನೆ ನಡೆಸಿದ ನಂತರ, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪನವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ನಗರದ ಫಕ್ಕೀರಸ್ವಾಮಿ ಮಠದ ಆವರಣದಿಂದ ಪ್ರಾರಂಭಗೊಂಡು, ರಾಣಿ ಚೆನ್ನಮ್ಮ ವೃತ್ತ, ಮುಖ್ಯ ರಸ್ತೆ ಮುಖಾಂತರ ಸಂಚರಿಸಿ, ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.
ಈ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ತೇಜಸ್ವಿ ಪಟೇಲ್ ಮಾತನಾಡಿ, ತಾಲ್ಲೂಕಿನ ಇಲಾಖೆಗಳ ಅಧಿಕಾ ರಿಗಳು ಜನರಿಗೆ ಸೇವೆಯನ್ನು ನೀಡಬೇಕು. ಅದನ್ನು ಬಿಟ್ಟು ಲಂಚದ ರೂಪದಲ್ಲಿ ದರವನ್ನು ನಿಗದಿಪಡಿಸಿಕೊಂಡು, ಸೇವೆಯನ್ನು ಒದಗಿಸು ವುದಕ್ಕೆ ಮುಂದಾಗಿದ್ದಾರೆ. ಭ್ರಷ್ಟಾಚಾರ ಮಿತಿ ಮೀರಿ ಆಡಳಿತ ಸುಧಾರಣೆ ಕಣ್ಮರೆಯಾಗಿದೆ. ಲಂಚ ನೀಡದೆ ಕೆಲಸಗಳಾಗುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಸ್ಥಿತಿ ಹೇಳತೀರದಾಗಿದ್ದು, ಪಾರದರ್ಶಕ ಆಡಳಿತ ನೀಡುವಂತಾಗಬೇಕಿದೆ ಎಂದರು.
ಭಾರತ ವಿದೇಶದಿಂದ ಆಹಾರ ಪದಾರ್ಥಗಳನ್ನು ಖರೀದಿಸುವ ಸಂದರ್ಭ ಇದುವರೆಗೂ ಉದ್ಭವ ವಾಗಿಲ್ಲ. ಬೆಳೆಗಳು ಇದ್ದಾಗ ಖರೀದಿ ಕೇಂದ್ರವನ್ನು ತೆರೆದು, ರೈತರ ಕುಟುಂಬಕ್ಕೆ ಆಸರೆಯಾಗಬೇಕು. ಭತ್ತದ ಬೆಳೆಗೆ 3,000 ಸಾವಿರ ರೂ. ದರ ನಿಗದಿ ಮಾಡಬೇಕು ಎಂದರು.
ರೈತ ಮುಖಂಡ ಜಿ. ಪ್ರಭುಗೌಡ ಕಡರ ನಾಯಕನಹಳ್ಳಿ, ಹಾಳೂರು ನಾಗರಾಜ್ ಮಾತನಾಡಿದರು.
ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ರೈತರ ಸಮಸ್ಯೆಗಳನ್ನು ಪರಿಹರಿ ಸಲು ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯನ್ನು ಇದೇ ದಿನಾಂಕ 26 ರಂದು ಬೆಳಗ್ಗೆ 11 ಗಂಟೆಗೆ ಗುರುಭವನದಲ್ಲಿ ಏರ್ಪಡಿಸಿದ್ದು, ತಾಲ್ಲೂಕಿನ ರೈತರು ಆ ಸಭೆಯಲ್ಲಿ ಭಾಗವಹಿಸಿ ತಮಗೆ ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಹೆಚ್.ಬಿ. ಕೊಟ್ರೇಶ್ ಭಾನುವಳ್ಳಿ, ಪ್ರಕಾಶ್ ಭಾನುವಳ್ಳಿ, ಶಂಭುಲಿಂಗಪ್ಪ ಬನ್ನಿಕೋಡು, ರುದ್ರಮುನಿ ಹನಗವಾಡಿ, ಮಹೇಶಪ್ಪ ದೊಗ್ಗಳ್ಳಿ, ಚಂದ್ರಪ್ಪ ಅಮರಾವತಿ, ಸಿರಿಗೆರೆ ಪಾಲಾಕ್ಷಪ್ಪ, ಬಸಪ್ಪ ಗರಡಿಮನಿ ಗುತ್ತೂರು, ಬಸವರಾಜ್ ಹಲಸಬಾಳು, ಬೀರೇಶ್ ಹಾಲಿವಾಣ, ಪಿ. ಸುರೇಶ್, ಕರಿಯಪ್ಪ ಹಾಲಿವಾಣ, ಡಿ.ಜಿ. ಬಸವರಾಜ್, ಪ್ರಕಾಶ್ ಕೊಂಡಜ್ಜಿ, ಜೀವಯ್ಯ ಕೊಂಡಜ್ಜಿ, ಕುಂಬ ಳೂರು ಅಂಜಿನಪ್ಪ, ವೈ. ಮೋಹನ್, ವಿಜಯ ಕುಮಾರ್, ರೇವಣಸಿದ್ದಪ್ಪ ಹನಗವಾಡಿ, ಪಿ. ಮಂಜಪ್ಪ, ಬಸಪ್ಪ, ಬಂಗಾರಿ ವಸಂತಪ್ಪ ಮತ್ತು ಕೃಷಿ ಇಲಾಖೆಯ ನಾರದಪ್ಪ, ತೋಟಗಾರಿಕೆ ಇಲಾಖೆಯ ಕವಿತಾ ಗ್ರೇಡ್ 2 ತಹಶೀಲ್ದಾರ್ ಶಶಿಧರ್ ಇತರರು ಹಾಜರಿ ದ್ದರು. ಸಿಪಿಐ ಸತೀಶ್ ಕುಮಾರ್ ಮತ್ತು ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ್, ಸತೀಶ್, ಲಿಂಗರಾಜ್, ಕವಿತಾ, ನಾಗರಾಜ್ ರೈತರಿಗೆ ಭದ್ರತೆ ಕಲ್ಪಿಸಿದರು.