ಮಲೇಬೆನ್ನೂರು, ಜು.10- ಕೊರೊನಾ ಸಂಕಷ್ಟದ ನಡುವೆಯೂ ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರಿಗೆ ಕರಕುಶಲ ತರಬೇತಿ ನಡೆಸಿರುವುದು ಶ್ಲ್ಯಾಘನೀಯ ಎಂದು ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಹಿಂಡಸಘಟ್ಟ ಗ್ರಾಮದ ಸ.ಹಿ.ಪ್ರಾ. ಶಾಲೆ ಯಲ್ಲಿ ಇಂದು ಹಮ್ಮಿಕೊಂಡಿದ್ದ ಶ್ರೀ ಮಂಜುನಾಥ ನಗರ ಮತ್ತು ಗ್ರಾಮೀಣ ಕೌಶಲ್ಯಾಭಿವೃದ್ಧಿ ತರಬೇತಿ ಸಂಸ್ಥೆ ಹಾಗೂ ಜನಶಿಕ್ಷಣ ಸಂಸ್ಥಾನ (ದಾವಣಗೆರೆ) ಇವರ ಸಹಯೋಗದಲ್ಲಿ ಟೈಲರಿಂಗ್, ಬ್ಯೂಟಿಷಿಯನ್ ಮತ್ತು ಹೈನುಗಾರಿಕೆ ತರಬೇತಿ ಪಡೆದ ಮಹಿಳಾ ಮತ್ತು ಪುರುಷರಿಗೆ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ, ಶ್ರೀಗಳು ಆಶೀರ್ವಚನ ನೀಡಿದರು.
ಕೃಷಿಯಿಂದಲೇ ರೈತರ ಉದ್ಧಾರ ಸಾಧ್ಯವಿಲ್ಲ. ಕೃಷಿ ಜೊತೆಗೆ ಹೈನುಗಾರಿಕೆ, ಮೀನುಗಾರಿಕೆ ಉದ್ಯಮ ನಡೆಸಬೇಕೆಂದು ಸಲಹೆ ನೀಡಿದ ಶ್ರೀಗಳು, ನಿರುದ್ಯೋಗಿ ಯುವಕ – ಯುವತಿಯರು ಇಂತಹ ತರಬೇತಿ ಪಡೆದು, ಸ್ವಾವಲಂಬಿ ಬದುಕು ರೂಪಿಸಿ ಕೊಳ್ಳಬೇಕು ಎಂದು ಶ್ರೀಗಳು ಕರೆ ನೀಡಿದರು.
ಗ್ರಾ.ಪಂ. ಉಪಾಧ್ಯಕ್ಷ ಎಂ.ರುದ್ರಗೌಡ ಅಧ್ಯಕ್ಷತೆ ವಹಿಸಿದ್ದರು. ಹರಿಹರ ಎಪಿಎಂಸಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ನಂದಿ ಸೌಹಾರ್ದ ಸಹಕಾರಿ ಅಧ್ಯಕ್ಷ ಹಳ್ಳಿಹಾಳ್ ವೀರನಗೌಡ, ವಾಸನ ಗ್ರಾ.ಪಂ. ಅಧ್ಯಕ್ಷೆ ಹಳದಮ್ಮ ಗದಿಗೆಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಎಂ.ಹೆಚ್.ಮಹೇಶ್, ಕೊಕ್ಕನೂರು ಗ್ರಾ.ಪಂ. ಉಪಾಧ್ಯಕ್ಷೆ ವಸಂತಮ್ಮ, ಮಲ್ಲೇಶ್, ಎಸ್.ಜಿ.ಈಶ್ವರಪ್ಪ, ಪಿ.ನಿಜಗುಣ, ಕೊಕ್ಕನೂರಿನ ದಾಸರ ಸೋಮಶೇಖರ್, ಉಪನ್ಯಾಸಕ ಹನುಮಗೌಡ, ಭರಮಗೌಡ, ಗ್ರಾ.ಪಂ. ಸದಸ್ಯರಾದ ವಾಸನದ ಜಿ.ದೇವರಾಜಪ್ಪ, ಕುಸುಮಾ ಅಂಜಿನಪ್ಪ, ಬಿ.ಜಗದೀಶ್, ನಾಗಮ್ಮ ತಿಪ್ಪೇಸ್ವಾಮಿ, ಮಂಜುಳಾ ವಿಜಯಕುಮಾರ್, ಕೆ.ಚಂದ್ರಪ್ಪ, ಅಶೋಕ್ ಐರಣಿ, ನಾಗಮ್ಮ ಚಿಕ್ಕಪ್ಪ, ಹಳ್ಳಿಹಾಳ್ ಈರಮ್ಮ ಚಂದ್ರಶೇಖರ್, ನೇತ್ರಾವತಿ ಹನುಮಗೌಡ, ಹಳ್ಳಿಹಾಳ್ ಹೆಚ್.ಎನ್.ಬಸವನಗೌಡ, ಗಾಯತ್ರಿ ಜಗದೀಶ್, ಜಿ.ಟಿ.ಕಟ್ಟಿ, ಹೆಚ್.ಬೀರಪ್ಪ, ಕೊಕ್ಕನೂರು ಸರೋಜಮ್ಮ, ದಾಸರ ಬಸವರಾಜ್, ಜನ ಶಿಕ್ಷಣ ಸಂಸ್ಥೆಯ ಜಗದೀಶ್, ಶಾಲಾ ಮುಖ್ಯ ಶಿಕ್ಷಕ ಗೋಪಜ್ಜರ ಅಂಜಿನಪ್ಪ ಮತ್ತಿತರರು ಭಾಗವಹಿಸಿದ್ದರು.
ರೂಪಾ, ಮಹಾದೇವಮ್ಮ ಪ್ರಾರ್ಥಿಸಿದರು. ಶಿಕ್ಷಕ ಎಂ.ಎಸ್.ರಮೇಶ್ ಸ್ವಾಗತಿಸಿದರು. ಕೆ.ವೈ.ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಬಿ.ವಿನೋದ ನಿರೂಪಿಸಿದರು. ಶಿಕ್ಷಕ ಮಂಜುನಾಥ್ ಪಾಳ್ಯ ವಂದಿಸಿದರು.