ಹರಪನಹಳ್ಳಿ, ಜು.10- ವಿವಿಧ ಯೋಜನೆಗಳಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಗುತ್ತಿಗೆದಾರರಿಗೆ ಸೂಚಿಸಿದರು.
ತಾಲ್ಲೂಕಿನ ನಾಗತಿಕಟ್ಟಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ನಾಗತಿಕಟ್ಟಿ ಗ್ರಾಮದಿಂದ ದಾವಣಗೆರೆ ತಾಲ್ಲೂಕು ಗಡಿವರೆಗೆ ಒಟ್ಟು 2.44 ಕೋಟಿ ರೂ. ಗಳ 2.71 ಕಿ.ಮೀ. ಉದ್ದದ ಸಿಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಈ ಭಾಗದ ಜನರ ಮನವಿಯಂತೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ ಅನುದಾನ ತಂದಿದ್ದು, ಜನರ ಅಪೇಕ್ಷೆಯಂತೆ ಈ ಭಾಗದಲ್ಲಿ ಕಲ್ಲು ಗಣಿಗಾರಿಕೆ ಜಾಸ್ತಿ ಇರುವುದರಿಂದ ಭಾರೀ ವಾಹನಗಳ ಸಂಚಾರ ಜಾಸ್ತಿ ಇರುತ್ತದೆ. ಆದ್ದರಿಂದ ಕಾಮಗಾರಿ ಗುಣಮಟ್ಟ ಉತ್ತಮವಾಗಿರಬೇಕು ಎಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದ್ದೇನೆ.
ಸಮಸ್ಯೆಗಳಿದ್ದರೆ ನೇರವಾಗಿ ನನ್ನ ಗಮನಕ್ಕೆ ತರಬೇಕು. ಈ ಕ್ಷೇತ್ರದ ಗಡಿಭಾಗದ ಗ್ರಾಮಗಳಿಗೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ನಾನು ಬದ್ಧನಾಗಿದ್ದು, ಮೂಲ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು. ಕೊರೊನಾ ಸೋಂಕಿತರ ಪ್ರಮಾಣ ಸಾಕಷ್ಟು ಇಳಿಮುಖವಾದರೂ ಕೂಡ ಜನರು ಎಚ್ಚರದಿಂದ ಇರಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಪಾಡಿಕೊಳ್ಳಿ. ಕೊರೊನಾ ಹೆಚ್ಚಳವಾಗದಂತೆ ಎಚ್ಚರ ವಹಿಸಿ ಎಂದರು.
ಜಿಲ್ಲಾ ಬಿಜೆಪಿ ಎಸ್‌ಟಿ ಮೋರ್ಚಾ ಕಾರ್ಯದರ್ಶಿ ಆರ್. ಲೋಕೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ ಎನ್. ಮಹೇಶಪ್ಪ, ಎಇ ಕುಬೇಂದ್ರನಾಯ್ಕ್, ಬಿ.ಆರ್. ಪ್ರಕಾಶ್ ನಾಯ್ಕ್, ಮಂಜುನಾಥ, ಕಿರಿಯ ಅಭಿಯಂತರ ಎ. ಮಂಜುನಾಥ್, ಬಸವನಗೌಡ ಪಾಟೀಲ್, ವೈ.ಶ್ರೀನಿವಾಸರೆಡ್ಡಿ, ರಾಜಪ್ಪ ಭೋವಿ, ಸಂಪತ್ ಕುಮಾರ್, ತಾ.ಪಂ. ಉಪಾಧ್ಯಕ್ಷ ಮಂಜಾನಾಯ್ಕ್, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಮಲ್ಲೇಶ್, ಮುಖಂಡರಾದ ಕುಮಾರ್ ನಾಯ್ಕ, ಮಂಜ್ಯಾನಾಯ್ಕ, ವೆಂಕಟೇಶ್ ನಾಯ್ಕ, ಶಶಿನಾಯ್ಕ, ಲಿಂಗರಾಜ, ಯು.ಪಿ. ನಾಗರಾಜ, ರಾಘವೇಂದ್ರಶೆಟ್ಟಿ, ಎಂ.ಸಂತೋಷ್ ಇನ್ನಿತರರಿದ್ದರು.