ಹರಪನಹಳ್ಳಿಯಲ್ಲಿ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ
ಹರಪನಹಳ್ಳಿ, ಏ.1- ಅನ್ನ, ಆಶ್ರಯ ಹಾಗೂ ಜ್ಞಾನ ದಾಸೋಹ ನೀಡುವುದು ಮಠಗಳ ಪರಂಪರೆಯಾಗಿದೆ ಎಂದು ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವರ
ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಪಟ್ಟಣದ ತೆಗ್ಗಿನಮಠದ ಆವರಣದಲ್ಲಿ ನಿರಾಶ್ರಿತರಿಗೆ ದಿನಸಿ ಪದಾರ್ಥಗಳ ಬ್ಯಾಗನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿ ಶ್ರೀಗಳು ಮಾತನಾಡಿದರು.
ಕೊರೊನಾ ತಡೆಗಟ್ಟಲು ಭಾರತ ಲಾಕ್ಡೌನ್ ಆಗಿದ್ದರಿಂದ ಅನೇಕರು ಆಹಾರವಿಲ್ಲದೇ ಪರದಾಟ ನಡೆಸುತ್ತಿದ್ದಾರೆ. ಇಂತಹವರ ನೆರವಿಗಾಗಿ
ಶ್ರೀಮಠದಿಂದ ಹಸಿದವರಿಗೆ ಅನ್ನ ನೀಡುವ ಮಹತ್ಕಾರ್ಯವನ್ನು ಮಾಡಿದ್ದೇವೆ. ಶ್ರೀಮಠದಲ್ಲಿ ನಡೆಯುತ್ತಿದ್ದ ನಿತ್ಯ ದಾಸೋಹವನ್ನು ತಾತ್ಕಾಲಿಕವಾಗಿ ರದ್ದುಪಡಿಸಿದ್ದರಿಂದ, ಪಟ್ಟಣದ ಹಿರೇಕೆರೆಯಲ್ಲಿ ಟೆಂಟ್ ಹಾಕಿಕೊಂಡು ಜೋಪಡಿಗಳಲ್ಲಿ ಜೀವನ ಸಾಗಿಸುತ್ತಿರುವ ಅಲೆಮಾರಿ ಸಮುದಾಯದ 20 ಮತ್ತು ತೆಲಂಗಾಣದ ನಿರಾಶ್ರಿತ 10 ಕುಟುಂಬಗಳು ಸೇರಿದಂತೆ ಒಟ್ಟು 30 ಕುಟುಂಬಗಳಿಗೆ ಜೀವನೋಪಾಯಕ್ಕಾಗಿ ಅಕ್ಕಿ, ಬೇಳೆ, ಅವಲಕ್ಕಿ, ರವಾ, ಪುಳಿಯೋಗರೆ, ಮಸಾಲೆ, ಹೆಸರು ಕಾಳು, ಉದ್ದಿನ ಬೆಳೆ, ಬೆಳಗಡಲೆ, ಎಣ್ಣೆ ಸೇರಿದಂತೆ ದಿನಸಿ ಸಾಮಗ್ರಿಗಳನ್ನು ತಾಲ್ಲೂಕು ಆಡಳಿತಕ್ಕೆ ನೀಡಲಾಗಿದೆ ಎಂದು ಹೇಳಿದರು.
ತೆಗ್ಗಿನಮಠದಲ್ಲಿ ನಿರಾಶ್ರಿತರಿಗೆ ದಿನಸಿ ಪದಾರ್ಥಗಳ ಬ್ಯಾಗ್ ವಿತರಣೆ
ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್ ವಿ.ಕೆ.ಮಾತನಾಡಿ, ಭಕ್ತರು ಮಠಕ್ಕೆ ಭಕ್ತಿ ಕಾಣಿಕೆ ನೀಡುವುದು ಸಾಮಾನ್ಯ. ಆದರೆ, ಜನರ ಕಷ್ಟದ ಕಾಲದಲ್ಲಿ ತೆಗ್ಗಿನಮಠ ಸಂಸ್ಥಾನ ಬಡವರ ಕಷ್ಟಕ್ಕೆ ನೆರವಾಗುತ್ತಿರುವುದು ಶ್ಲ್ಯಾಘನೀಯ ಎಂದರು.
ಡಿವೈಎಸ್ಪಿ ಮಲ್ಲೇಶ್ ದೊಡ್ಡಮನೆ ಮಾತನಾಡಿ, ಲಾಕ್ಡೌನ್ ನಿಂದ ಅನೇಕ ಜನರು ಪರದಾಟ ನಡೆಸುತ್ತಿದ್ದಾರೆ. ಜನರ ನೆರವಿಗೆ ವಿವಿಧ ಇಲಾಖೆಯ ಅಧಿಕಾರಿಗಳು ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಸಂಕಷ್ಟದ ಸಮಯದಲ್ಲಿ ತಾಲ್ಲೂಕಿನಲ್ಲಿ ತೆಗ್ಗಿನಮಠದ ಕಾರ್ಯವು ಮಾದರಿಯಾಗಿದೆ ಎಂದು ತಿಳಿಸಿದರು.
ತೆಗ್ಗಿನಮಠದ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖ ರಯ್ಯ, ಸಿಪಿಐ ಕೆ.ಕುಮಾರ್, ಪಿಎಸ್ಐ ಪ್ರಕಾಶ್, ನಿರಾಶ್ರಿ ತರ ಕೇಂದ್ರದ ಅಧಿಕಾರಿಗಳಾದ ಸಮಾಜ ಕಲ್ಯಾಣ ಅಧಿ ಕಾರಿ ಆನಂದ ವೈ.ಡೊಳ್ಳಿನ,
ಬಿಸಿಎಂ ಇಲಾಖೆಯ ವಿಸ್ತರ ಣಾಧಿಕಾರಿ ಭೀಮಾನಾಯ್ಕ, ಸಿಡಿಪಿಒ ಮಂಜುನಾಥ್, ನಿಲಯ ಪಾಲಕರಾದ
ಬಿ.ಹೆಚ್.ಚಂದ್ರಪ್ಪ, ಎನ್.ಜಿ.ಬಸವರಾಜ್, ಮಲ್ಲೇಶನಾಯ್ಕ ಹಾಗೂ ಇತರರಿದ್ದರು.