ವಿದ್ಯಾರ್ಥಿಗಳ ಕನಸು ಭಗ್ನ, ಭವಿಷ್ಯದ ಬಗ್ಗೆ ಅನಿಶ್ಚಿತತೆ

ಕೊರೊನಾದಿಂದ ವಿದೇಶಿ ಅಧ್ಯಯನದ ಮೇಲೆ ಕರಿನೆರಳು

ನವದೆಹಲಿ, ಏ. 5 – ಕೊರೊನಾ ವೈರಸ್ ಕಾರಣದಿಂದಾಗಿ ವಿದೇಶದಲ್ಲಿ ಅಧ್ಯಯನ ಮಾಡುವ ಸಾಕಷ್ಟು ಜನರ ಕನಸುಗಳು ಭಗ್ನವಾಗಿವೆ. ಭವಿಷ್ಯದ ಅನಿಶ್ಚಿತತೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ.

ಒಂಭತ್ತು ತಿಂಗಳ ಹಿಂದೆ ಆಸ್ಟ್ರೇಲಿ ಯಾದ ಡೀಕಿನ್ ವಿಶ್ವವಿದ್ಯಾನಿಲಯದಲ್ಲಿ ಸ್ಥಾನ ಪಡೆದಿದ್ದ ತೃಪ್ತ ಲುತ್ರ ಅವರು ಆಗಸಕ್ಕೆ ಮೂರೇ ಗೇಣು ಎಂಬಂತಿದ್ದರು. ಆದರೆ, ಈಗ ವಿಶ್ವದಾದ್ಯಂತ ಕೊರೊನಾ ವೈರಸ್‌ಗಳಿಂದ ಆಗುವ ಪರಿಣಾಮ  ಹಾಗೂ ಅನಿಶ್ಚಿತತೆಯಿಂದಾಗಿ ಚಿಂತೆಗೀಡಾಗಿದ್ದಾರೆ.

ಅನುಷ್ಕಾ ರೇ ಅವರು ಬರುವ ಸೆಪ್ಟೆಂಬ ರ್‌ನಲ್ಲಿ ನ್ಯೂಯಾರ್ಕ್‌ಗೆ ಅಧ್ಯಯನಕ್ಕಾಗಿ ತೆರ ಳುವ ಸಿದ್ಧತೆಯಲ್ಲಿದ್ದರು. ಈಗ ಹಿನ್ನಡೆಯಾ ಗಿದೆ ಯಾದರೂ, ಇದರಿಂದ ಇಡೀ ಜೀವನವೇನೂ ಬದಲಾಗದು ಎಂಬ ಭರವಸೆಯಲ್ಲಿದ್ದಾರೆ.

ಕೆನಡಾ ಹಾಗೂ ಇಟಲಿಯ ಹಲವು ಕಾಲೇಜುಗಳಲ್ಲಿ ಪ್ರವೇಶದ ಅವಕಾಶ ಗಿಟ್ಟಿ ಸಿದ್ದ ತಾರಾ ಒಸನಾ ಅವರು, ಭಾರತದಲ್ಲೇ ಅಧ್ಯಯನಕ್ಕೆ ಯೋಜಿಸುತ್ತಿದ್ದಾರೆ.

ಕೊರೊನಾ ಕಾರಣದಿಂದಾಗಿ ವಿದೇಶ ದಲ್ಲಿ ಅಧ್ಯಯನ ಮಾಡಬೇಕು ಎಬ ಹಲವು ವಿದ್ಯಾರ್ಥಿಗಳ ಕನಸು ಭಗ್ನವಾಗಿದೆ. ಇಲ್ಲವೇ ವಿಶ್ವದ ಹಲವೆಡೆ ಹೇರಲಾಗಿರುವ ಲಾಕ್‌ ಡೌನ್‌ ಕಾರಣದಿಂದಾಗಿ ಅತಂತ್ರರಾಗಿದ್ದಾರೆ.

ವಿದೇಶಗಳಲ್ಲಿ ಈಗಾಗಲೇ ಅಧ್ಯಯನ ದಲ್ಲಿ ತೊಡಗಿರುವವರು ಹಾಗೂ ಅಂತಿಮ ವರ್ಷ ದಲ್ಲಿರುವವರಿಗೂ ಸಮಸ್ಯೆಗಳು ಎದು ರಾಗಿವೆ. ವೀಸಾ ಅವಧಿ ವಿಸ್ತರಣೆಯಾಗುವುದೇ, ಇಲ್ಲವೇ ಓದಿಗೆ ಹಣಕಾಸು ಸಮಸ್ಯೆ ಎದುರಾಗಲಿದೆಯೇ ಎಂಬ ಚಿಂತೆ ಕಾಡುತ್ತಿದೆ.

ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುತ್ತಿರುವವರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಿದೆ. ಪರಿಸ್ಥಿತಿ ಈಗ ಗಂಭೀರವಾಗಿದೆ ಮತ್ತು ಕೆಲವರಿಗೆ ದೀರ್ಘಾವಧಿ ಪರಿಣಾಮವೂ ಆಗಲಿದೆ ಎಂದು ವಿದೇಶದಲ್ಲಿ ಅಧ್ಯಯನ ಮಾಡುವ ವರಿಗೆ ಸಲಹೆ ನೀಡುವ ಸಂಸ್ಥೆಗಳು ತಿಳಿಸಿವೆ.

ಹಲವು ವಿದ್ಯಾರ್ಥಿಗಳು ಈಗಾಗಲೇ ಪ್ರವೇಶ ಪಡೆದಿದ್ದಾರೆ. ಆದರೆ, ಈಗ ಆನ್‌ಲೈನ್ ತರಗತಿಯ ಮೊರೆ ಹೋಗಿದ್ದಾರೆ. ಮುಂದೆ ಪರಿಸ್ಥಿತಿ ಸುಧಾರಿಸುವ ಬಗ್ಗೆಯೂ ಸ್ಪಷ್ಟತೆ ಇಲ್ಲ. ವಿದೇಶದಲ್ಲಿ ಅಧ್ಯಯನಕ್ಕೆ ತೆರಳಲು ಬಯಸಿದವರು ಈಗ ಆನ್‌ಲೈನ್ ತರಗತಿಗಳಿಗೆ ಭಾರೀ ಶುಲ್ಕ ತೆರುವಂತಾಗಿದೆ. ಆನ್‌ಲೈನ್ ಶಿಕ್ಷಣ ಅಷ್ಟೇನೂ ಆಕರ್ಷಣೀಯವಲ್ಲ ಎಂದು ದೆಹಲಿಯಲ್ಲಿ ಸ್ಟಡಿ ಅಬ್ರಾಡ್ ಸಂಸ್ಥೆ ನಡೆಸುತ್ತಿರುವ ಅನುಪಮ್ ಸಿಂಗ್ ತಿಳಿಸಿದ್ದಾರೆ.

ಲಿವರ್‌ಪೂಲ್ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆದಿದ್ದೆ. ಈಗ ಆನ್‌ಲೈನ್ ಮೂಲಕ ತರಗತಿಯಲ್ಲಿ ಭಾಗವಹಿಸುವಂ ತಾಗಿದೆ. ಆದರೆ, ಡಿಜಿಟಲ್ ತರಗತಿಗಳು ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡುವ ಮೂಲ ಉದ್ದೇಶವನ್ನೇ ಭಗ್ನಗೊಳಿಸುತ್ತವೆ. ನಾನು ದುಬಾರಿ ಶುಲ್ಕಕ್ಕಾಗಿ ಶಿಕ್ಷಣ ಸಾಲ ಪಡೆದಿದ್ದೇನೆ. ಇದು ಈಗ ಅನಗತ್ಯ ಹೊರೆಯಾಗಿದೆ ಎಂದು ರಹಸಿ ಮುಖಿಜಾ ತಿಳಿಸಿದ್ದಾರೆ.

ಕೊರೊನಾ ಕಾರಣದಿಂದಾಗಿ ಅಮೆರಿಕ ದಲ್ಲಿ ಅತಂತ್ರರಾಗಿರುವ ವಿದ್ಯಾರ್ಥಿಗಳು ಹಾಗೂ ವೃತ್ತಿಪರರ ವೀಸಾ ಅವಧಿ ವಿಸ್ತರಿಸುವಂತೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇತ್ತೀಚೆಗೆ ಅಮೆರಿಕಕ್ಕೆ ಒತ್ತಾಯಿಸಿದ್ದರು.

error: Content is protected !!